ಸೋಮವಾರ, ಜೂನ್ 14, 2021
21 °C

ನಂದೀಶ - ಬಸವನ ಮೈದಡವಿದ ಬಿಎಸ್‌ವೈ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

B S Yediyurappa

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ‘ನಂದೀಶ’ ಮತ್ತು ‘ಬಸವ’ ಎಂಬ ಕರುಗಳ ಮೈದಡವುತ್ತಿರುವ ಫೋಟೊ ನೆಟ್ಟಿಗರ ಮನಗೆದ್ದಿದೆ.

‘ನನ್ನ ದಿನಚರಿ ಪ್ರಾರಂಭವಾಗುವುದೇ ಬೆಳಗಿನ ನಡಿಗೆ ಮೂಲಕ ಮತ್ತು ಆ ಸಮಯದಲ್ಲಿ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವನ ಮೈದವಡದೆ ಅದು ಪೂರ್ಣವಾಗದು. ಮೂಕ ಪ್ರಾಣಿಗಳ ಪ್ರೀತಿ, ಅಕ್ಕರೆಗಳ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ’ ಎಂದೂ ಯಡಿಯೂರಪ್ಪ ಅವರು, ಟ್ಯಾಗ್ ಮಾಡಿದ ಫೋಟೊ ಜೊತೆ  ಬರೆದುಕೊಂಡಿದ್ದಾರೆ.

ಯಡಿಯೂರಪ್ಪ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಹಸುಗಳನ್ನು ಸಾಕಿದ್ದು, ಅವುಗಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಹಸುಗಳ ಜೊತೆಗಿದ್ದ ಫೋಟೊವನ್ನು ಇತ್ತೀಚೆಗೆ ಅವರು ಹಂಚಿಕೊಂಡಿದ್ದರು. ಎರಡು ಕರುಗಳ ಮೈದಡಹುವ ಫೋಟೊವನ್ನು ಭಾನುವಾರ ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು