ಭಾನುವಾರ, ಆಗಸ್ಟ್ 18, 2019
26 °C

ಶೈಕ್ಷಣಿಕ ಮಂಡಳಿಗೆ ವಿದ್ಯಾರ್ಥಿಗಳ ನೇಮಕ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಗೆ ಎರಡನೇ ಬಾರಿಗೆ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರಕ್ರಿಯೆ ಆರಂಭವಾಗಿದೆ.

2014ರಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳ ನೇಮಕಾತಿ ನಡೆದಿತ್ತು. ಅವರ ಅವಧಿ ಇದೀಗ ಮುಗಿದಿದ್ದು, ಮುಂದಿನ ಬಾರಿ ನೇಮಕವಾಗಲಿರುವ ಆರು ಮಂದಿ ವಿದ್ಯಾರ್ಥಿಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಆಹ್ವಾನಿಸಿದೆ.

ವ್ಯಾಸಂಗ, ಎನ್‌ಸಿಸಿ, ಎನ್‌ಎಸ್‌ಎಸ್‌ ಸಹಿತ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ, ಪ್ರತಿಭಾವಂತ ಸ್ನಾತಕೋತ್ತರ/ ಪದವಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳೊಂದಿಗೆ ಹೆಸರು ಕಳುಹಿಸಿಕೊಡಲು ವಿಶ್ವವಿದ್ಯಾಲಯ/ ಕಾಲೇಜುಗಳಿಗೆ ಸೂಚಿಸಲಾಗಿದೆ.

 

Post Comments (+)