ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಶಿವಾಜಿ ಜಯಂತಿ

Last Updated 20 ಫೆಬ್ರುವರಿ 2018, 8:35 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಮರಾಠ ಸಮಾಜ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಯುವಕ ಸಂಘದ ಆಶ್ರಯದಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ರಾಜಬೀದಿಯಲ್ಲಿರುವ ದೇವಾಲಯದಿಂದ ಬೆಳಗ್ಗೆ ಅಭಿಷೇಕ, ತೊಟ್ಟಿಲು ಸೇವೆ, ಕುಂಕುಮಾರ್ಚನೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಕನಕಾಚಪತಿ ದೇವಸ್ಥಾನ, ರಾಜಬೀದಿ, ಒಳಗೊಂಡಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು. ಯುವಕರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಸಮಾಜದ ಅಧ್ಯಕ್ಷ ನಾಗರಾಜ ಚವ್ಹಾಣ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಸವರಾಜ ಧಡೇಸೂಗರು, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಂಬಣ್ಣ ಮಹಿಪತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಮನೂರಪ್ಪ ಆರೇರ್, ರಾಜೀವಗಾಂಧಿ ಯುವ ಶಕ್ತಿ ಸಂಘದ ಮಾಜಿ ಅಧ್ಯಕ್ಷ ಅಂಬಾಜಿರಾವ್ ಆರೇರ್ , ಪ್ರಮುಖರಾದ ಹನುಮೇಶ ಮಹಿಪತಿ, ದೊಡ್ಡ ನಾಗರಾಜ ಆರೇರ್, ಹನುಮಂತಪ್ಪ ಆರೇರ್, ಭೀಮಣ್ಣ, ಶ್ರೀನಿವಾಸ ಹೋಟೆಲ್ , ಬಸವರಾಜ ಆರೇರ್ , ಮುದಿಯಪ್ಪ, ರಮೇಶ ಕಂಪ್ಲಿ, ಮಂಜುನಾಥ ಮರಾಠಿ, ನಾಗರಾಜ, ಶರಣಪ್ಪ ಮಹಿಪತಿ, ನರಸಿಂಗರಾವ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ವಿವಿಧೆಡೆ ಶಿವಾಜಿ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT