ನಿರ್ಮಾಣ ಹಂತದ ಕಟ್ಟಡ ಕುಸಿತ; ದಂಪತಿ, ಮಗು ಸೇರಿ ಐವರ ಸಾವು

ಶುಕ್ರವಾರ, ಜೂಲೈ 19, 2019
24 °C

ನಿರ್ಮಾಣ ಹಂತದ ಕಟ್ಟಡ ಕುಸಿತ; ದಂಪತಿ, ಮಗು ಸೇರಿ ಐವರ ಸಾವು

Published:
Updated:

ಬೆಂಗಳೂರು: ನಗರದ ಪುಲಿಕೇಶಿ ನಗರ ಬಳಿಯ ಹಚಿನ್ಸ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಬೇಸಮೆಂಟ್ ಕುಸಿದಿದ್ದರಿಂದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿ, ಮಗು ಸೇರಿ ಐವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ನಾರಾಯಣ (26), ನಿರ್ಮಲ (20) ಮಗು ಅನುಷ್ಕಾ (3) ಶಂಭು ಕುಮಾರ್ (27) ಖಗನ್ ಸರ್ಕಾರ (48) ಮೃತರು. ಉತ್ತಮ್, ಸಂತೋಷ್, ಉಮೇಶ್, ಅಮಿರ್, ಬೆತ್ತಾಮ್, ರಾಮ್ ಬಾಲಕ, ಮಂಜುದೇವಿ ಗಾಯಗೊಂಡವರು. ಅವರನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.

ನಾಲ್ಕು ಅಂತಸ್ತಿನ ಸಾಯಿ ಆದಿ‌ ಅಂಬಾಲ್ ಅಪಾರ್ಟ್ಮೆಂಟ್‌ ಬೇಸ್‌ಮೆಂಟ್‌ನಲ್ಲಿ ಅವರು ವಾಸವಿದ್ದರು. ಸ್ಥಳಕ್ಕೆ ಫ್ರೇಜರ್ ಟೌನ್ ಪೊಲೀಸರು ಬಂದಿದ್ದಾರೆ‌.


ಸಾಯಿ ಆದಿ‌ ಅಂಬಾಲ್ ಅಪಾರ್ಟ್ಮೆಂಟ್‌

ಬುಧವಾರ ಬೆಳಗ್ಗಿನ ಜಾವ 2.15ರ ಸುಮಾರಿಗೆ ಘಟನೆ ನಡೆದಿದೆ. ಬಿಹಾರ, ರಾಜಸ್ಥಾನ, ನೇಪಾಳ‌ ಮೂಲದವರು ಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೂರು ಅಂತಸ್ತಿನ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಮತ್ತು ಕಾರ್ಮಿಕರು ವಾಸವಿದ್ದರು. 13 ಜನ ವಾಸವಿದ್ದ ಎನ್ನಲಾಗುತ್ತಿದೆ. 

ಬಿಬಿಎಂಪಿ ಪೂರ್ವ ವಿಭಾಗದ ಜಂಟಿ ಆಯುಕ್ತ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ನಿರ್ಮಾಣ ಹಂತ ಕಟ್ಟಡ ಇರುವ ಕರೆ ನೀರಿನಾಂಶ ಹೆಚ್ಚಿದೆ. ಮುಂಜಾಗ್ರತ ಕ್ರಮ ವಹಿಸಿಲ್ಲ ಇದರಿಂದಲೇ ದುರ್ಘಟನೆ ನಡೆದಿದೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 8

  Sad
 • 1

  Frustrated
 • 3

  Angry

Comments:

0 comments

Write the first review for this !