ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಮಾರ್ಗದ ಸಂಪರ್ಕ ಒಳಚರಂಡಿಗೆ ಕಲ್ಪಿಸಿದರೆ ಕ್ರಮ: ಜಲಮಂಡಳಿ ಎಚ್ಚರಿಕೆ

Last Updated 30 ಆಗಸ್ಟ್ 2022, 21:09 IST
ಅಕ್ಷರ ಗಾತ್ರ

ಬೆಂಗಳೂರು:ಕಟ್ಟಡದ ಮಳೆ ನೀರು ಸಂಗ್ರಹದ ಮಾರ್ಗವನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದುಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.

ಜಲಮಂಡಳಿ ವತಿಯಿಂದ ಕಟ್ಟಡದ ಮಳೆ ನೀರು ಮಾರ್ಗವನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸಿರುವ ಕಟ್ಟಡಗಳ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ಅಂತಹ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು. ಈ ಕಟ್ಟಡಗಳ ಮಾಲೀಕರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ–1964ರ ಸೆಕ್ಷನ್‌ 109ರ ಪ್ರಕಾರ ಕಾನೂನು ಕ್ರಮಕೈಗೊಳ್ಳ ಲಾಗುವುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಒಳಚರಂಡಿ ವ್ಯವಸ್ಥೆಯನ್ನು ಗೃಹ ಬಳಕೆಯ ತ್ಯಾಜ್ಯ ನೀರನ್ನು ಹರಿಸಲು ಮಾತ್ರ ವಿನ್ಯಾಸಗೊಳಿಸಲಾಗಿದೆ. ಬೆಂಗ ಳೂರು ನಗರದ ಕೆಲವು ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ರಸ್ತೆ ಮೇಲಿನ ನೀರು ಜಲಮಂಡಳಿಯ ಇಳಿ ಗುಂಡಿಗಳ ಮೂಲಕ ಒಳಚರಂಡಿಯಲ್ಲಿ ಹರಿಸಲಾಗುತ್ತದೆ. ಇದಲ್ಲದೆಯೇ ಕೆಲವು ಪ್ರದೇಶದ ರಸ್ತೆಗಳಲ್ಲಿ ಹಾಗೂ ಕೊಳಚೆ ಪ್ರದೇಶಗಳಲ್ಲಿ ಮಳೆ ನೀರು ಕಾಲುವೆಗಳು ಇಲ್ಲದೆ ಇರುವುದರಿಂದ ಮಳೆ ನೀರನ್ನು ಜಲಮಂಡಳಿಯ ಒಳಚರಂಡಿ ವ್ಯವಸ್ಥೆಗೆ ಹರಿಬಿಡಲಾಗುತ್ತಿದೆ. ಇದರಿಂದ, ಒಳಚರಂಡಿ ವ್ಯವಸ್ಥೆಯು ವಿನ್ಯಾಸಗೊಳಿಸಿದ ಪ್ರಮಾಣಕ್ಕಿಂತ ಹೆಚ್ಚಿನ ನೀರು ಹರಿಯುವುದರಿಂದ ಕೆಲವು ಕಡೆ ರಸ್ತೆ ಮೇಲೆ ಉಕ್ಕಿ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT