ಬೆಂಗಳೂರು: ಬೆಂಗಳೂರು ಜಲಮಂಡಳಿ ಮೊದಲ ಸಲ ಜಾರಿಗೆ ತಂದಿರುವ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರನ್ನು ಗುರುತಿಸಿ ನೋಟಿಸ್ ನೀಡಲಾಗಿತ್ತು. ಏಪ್ರಿಲ್ ತಿಂಗಳ ಎರಡು ವಾರದಲ್ಲಿ 56,765 ಗ್ರಾಹಕರಿಂದ ₹12.15 ಕೋಟಿ ಸಂಗ್ರಹವಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಹೆಚ್ಚಿನ ಬಾಕಿ ವಸೂಲಿಯಾಗುವ ನಿರೀಕ್ಷೆ ಇದೆ.

ಹಳೆಯ ದತ್ತಾಂಶಗಳನ್ನು ಪರಿಶೀಲಿಸಿದ ಮಂಡಳಿಯು, 3,73,883 ದಾಖಲೆಗಳ ಪೈಕಿ ಒಟಿಎಸ್ಗೆ ಅರ್ಹವಾದ 2,81,019 ದಾಖಲೆಗಳನ್ನು ಪ್ರತ್ಯೇಕಿಸಿದೆ. ಈಗಾಗಲೇ 2,12,359 ನೋಟಿಸ್ಗಳನ್ನು ಮುದ್ರಿಸಿ ಆಯಾ ಉಪ-ವಿಭಾಗಗಳಿಗೆ ವಿತರಣೆಗಾಗಿ ಕಳುಹಿಸಲಾಗಿದೆ.

ನೋಟಿಸ್ ವಿತರಣೆ ವಿಳಂಬವಾಗದಂತೆ ನೋಡಿಕೊಳ್ಳಲು, ಮಂಡಳಿಯು ಮುದ್ರಣ ಕಾರ್ಯವನ್ನು ಹೊರಗುತ್ತಿಗೆ ನೀಡಿದೆ. ನಿಯೋಜಿತ ಸಂಸ್ಥೆಯು ಪ್ರತಿ 48 ಗಂಟೆಗಳಿಗೆ 50,000ದಷ್ಟು ನೋಟಿಸ್ ಮುದ್ರಿಸುವ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಬಾಕಿ ಉಳಿದಿರುವ 1,17,098 ನೋಟಿಸ್ಗಳನ್ನು ಮೇ 10ರ ಒಳಗೆ ಮುದ್ರಿಸಿ, ಫಲಾನುಭವಿಗಳಿಗೆ ತಲುಪಿಸುವ ಗುರಿಯನ್ನು ಮಂಡಳಿ ಹೊಂದಿದೆ.

ಈ ಯೋಜನೆ ಮೂಲಕ ₹471.56 ಕೋಟಿ ಅಸಲನ್ನು ಸಂಗ್ರಹಿಸುವ ಗುರಿ ಜಲಮಂಡಳಿಯದ್ದಾಗಿದೆ. ₹252.29 ಕೋಟಿ ಬಡ್ಡಿ ಮನ್ನಾ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.