ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿಯಿಂದ ಕಟ್ಟಡಗಳ ಸಮೀಕ್ಷೆ

Last Updated 8 ಜೂನ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡಗಳ ವಿಸ್ತೀರ್ಣ, ಮಹಡಿ ಸಂಖ್ಯೆ, ಕೊಳವೆಬಾವಿ, ಒಳಚರಂಡಿ ಸಂಪರ್ಕ, ಮಳೆ ನೀರು ಕೊಯ್ಲು ವ್ಯವಸ್ಥೆ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಕಟ್ಟಡಗಳ ಸಮೀಕ್ಷೆ ನಡೆಸಲು ಜಲಮಂಡಳಿ ಮುಂದಾಗಿದೆ.

ಈ ಎಲ್ಲ ಮಾಹಿತಿ ಸಂಗ್ರಹಿಸಿ, ಜಲಮಂಡಳಿಯ ದತ್ತಾಂಶದಲ್ಲಿ ಸೇರ್ಪಡೆ ಮಾಡಲು ಮಂಡಳಿ ತೀರ್ಮಾನಿಸಿದೆ.ಮಂಡಳಿಯ ಜಲಮಾಪನ ಓದುಗರು ನೀರಿನ ಬಿಲ್ ವಿತರಿಸುವ ಸಂದರ್ಭದಲ್ಲಿ ಈ ಸಮೀಕ್ಷೆಯ ಅರ್ಜಿಯನ್ನು ಮನೆ ಮಾಲೀಕರಿಗೆ ನೀಡುತ್ತಾರೆ.

ಅರ್ಜಿಯಲ್ಲಿರುವ ಮಾಹಿತಿಗಳನ್ನು ಭರ್ತಿ ಮಾಡಿ ಸಾರ್ವಜನಿಕರು ಮುಂದಿನ ತಿಂಗಳು ಮಾಪನ ಓದುಗರಿಗೆ ನೀಡಬಹುದು ಅಥವಾ ಸಮೀಪದ ಉಪವಿಭಾಗದ ಕಚೇರಿಗಳಲ್ಲಿ ಅಥವಾ ಸೇವಾಠಾಣೆಯಲ್ಲಿ ಸಲ್ಲಿಸಬಹುದು.

ಸಮೀಕ್ಷೆಯ ಕುರಿತು ಹಾಗೂ ಅರ್ಜಿಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮಂಡಳಿಯ ಜಾಲತಾಣ www.bwssb.gov.in ನಲ್ಲಿ ಪಡೆಯಬಹುದಾಗಿದೆ ಎಂದು ಜಲಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT