ಕ್ಯಾಬ್ ಚಾಲಕನ ಹತ್ಯೆ; ಆರೋಪಿಗಳು ಶರಣು

7
ನೈಸ್ ರಸ್ತೆಯಲ್ಲೇ ಕೊಚ್ಚಿ ಕೊಲೆಗೈದಿದ್ದರು

ಕ್ಯಾಬ್ ಚಾಲಕನ ಹತ್ಯೆ; ಆರೋಪಿಗಳು ಶರಣು

Published:
Updated:
Deccan Herald

ಬೆಂಗಳೂರು: ನೈಸ್ ರಸ್ತೆಯಲ್ಲಿ ಸೆ.19ರಂದು ನಡೆದಿದ್ದ ಕಾರು ಚಾಲಕ ಆರ್.ಹರೀಶ್ (30) ಕೊಲೆ ಪ್ರಕರಣದ ಆರೋಪಿಗಳ ಪೈಕಿ ಮೂವರು ನ್ಯಾಯಾಲಯಕ್ಕೆ ಶರಣಾಗಿದ್ದರೆ, ಇನ್ನೂ ಇಬ್ಬರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಕಾಳೇನ ಅಗ್ರಹಾರದ ಹರೀಶ್, ಹುಳಿಮಾವು ಠಾಣೆ ರೌಡಿಶೀಟರ್ ಮಾದೇಶನ ಅಕ್ಕನ ಜತೆ ಸಲುಗೆಯಿಂದ ಇದ್ದ. ಈ ವಿಚಾರ ತಿಳಿದು ಕೆರಳಿದ್ದ ಮಾದೇಶ, ಆತನಿಂದ ದೂರ ಇರುವಂತೆ ಸೋದರಿಗೆ ಬೈದು ಬುದ್ಧಿ ಹೇಳಿದ್ದ. ಆದರೂ, ಅವರ ಸ್ನೇಹ ಮುಂದುವರಿದಿದ್ದರಿಂದ ಸಹಚರರ ಜತೆ ಸೇರಿ ಹರೀಶ್‌ನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಮಾದೇಶ, ಸುನೀಲ್, ಆನಂದ್ ಸೆ.30ರಂದು ನ್ಯಾಯಾಲಯಕ್ಕೆ ಶರಣಾದರು. ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೆಂಗೇರಿಯ ಶ್ರೀನಾಥ್ ಹಾಗೂ ಗಿರೀಶ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ಬಾಯ್ಬಿಟ್ಟರು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಮಂಗಳವಾರ ಅವರಿಬ್ಬರನ್ನೂ ವಶಕ್ಕೆ ಪಡೆದು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆವು’ ಎಂದು ಮಾಹಿತಿ ನೀಡಿದ್ದಾರೆ.

‘ಫೈನಾನ್ಸ್ ವ್ಯವಹಾರವನ್ನೂ ಮಾಡುತ್ತಿದ್ದ ಹರೀಶ್, ಮೂರು ತಿಂಗಳ ಹಿಂದೆ ಹಣಕಾಸಿನ ವಿಚಾರವಾಗಿ ಮಾದೇಶನ ಜತೆ ಜಗಳವಾಡಿಕೊಂಡಿದ್ದ. ಆ ನಂತರ ಹರೀಶ್‌ನನ್ನು ಕಂಡರೆ ಕಿಡಿಕಾರುತ್ತಿದ್ದ ಆರೋಪಿಗೆ, ಆತ ತನ್ನ ಅಕ್ಕನೊಂದಿಗೇ ಸಲುಗೆ ಬೆ
ಳೆಸಿರುವ ವಿಚಾರ ಇತ್ತೀಚೆಗೆ ಗೊತ್ತಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಆತನನ್ನು ಕೊಲ್ಲಲು ನಿರ್ಧರಿಸಿದ ಮಾದೇಶನಿಗೆ, ಬಾಲ್ಯದ ಸ್ನೇಹಿತರು ನೆರವು ನೀಡುವ ಭರವಸೆ ಕೊಟ್ಟಿದ್ದರು. ಸೆ.19ರ ಸಂಜೆ 4 ಗಂಟೆ ಸುಮಾರಿಗೆ ಹರೀಶ್ ಬೈಕ್‌ನಲ್ಲಿ ಕೆಂಗೇರಿ ಕಡೆಗೆ ತೆರಳುತ್ತಿದ್ದ. ಈ ವೇಳೆ ಅವನನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು
ಬಂದಿದ್ದ ಹಂತಕರು, ನೈಸ್ ರಸ್ತೆಯ ತುಳಸಿ ಕೆರೆ ಬಳಿ ಬೈಕ್‌ಗೆ ವಾಹನ ಗುದ್ದಿಸಿದ್ದರು. ಕೆಳಗೆ ಬಿದ್ದಾಗ ದಾಳಿ ನಡೆಸಿ ಪರಾರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !