ಕೆನರಾ ಬ್ಯಾಂಕ್‌ ನೂತನ ಶಾಖೆ ಉದ್ಘಾಟನೆ

7

ಕೆನರಾ ಬ್ಯಾಂಕ್‌ ನೂತನ ಶಾಖೆ ಉದ್ಘಾಟನೆ

Published:
Updated:
Deccan Herald

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಕೆನರಾ ಬ್ಯಾಂಕ್‌ನ ನೂತನ ಶಾಖೆಯನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ.ಭಾರತಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ದೇಶದಾದ್ಯಂತ ಕೆನರಾಬ್ಯಾಂಕ್ 6,300 ಶಾಖೆಗಳನ್ನು ಹೊಂದಿದೆ. ಬೆಂಗಳೂರು ನಗರದಲ್ಲಿ ಇದು 178ನೇ ಶಾಖೆಯಾಗಿದೆ. ಈ ಪ್ರದೇಶದಲ್ಲಿ ಶಾಖೆ ಆರಂಭವಾಗುತ್ತಿರುವುದು ಸಂತಸದಾಯಕ. ಸ್ಥಳೀಯ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲಿದೆ. ಹಲವು ಕಂಪನಿಗಳು ಈ ಪ್ರದೇಶದಲ್ಲಿ ಇರುವುದರಿಂದ ಭವಿಷ್ಯದಲ್ಲಿ ಬ್ಯಾಂಕ್‌ ಪ್ರಗತಿ ಹೊಂದಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ವೃತ್ತದ ಮಹಾಪ್ರಬಂಧಕ ಡಿ.ವಿಜಯ ಕುಮಾರ್‌, ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಎಸ್.ಡಿ.ಬಿರಾದಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಿ.ಎಸ್.ಗಿರೀಶ್ ಪಟೇಲ್, ಶಾಖೆಯ ವ್ಯವಸ್ಥಾಪಕ ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !