ಜೂನ್‌ 28ಕ್ಕೆ ರಾಜ್ಯ ಕ್ಯಾನ್ಸರ್‌ ಸಂಸ್ಥೆ ಸಂಕೀರ್ಣ ಉದ್ಘಾಟನೆ

7

ಜೂನ್‌ 28ಕ್ಕೆ ರಾಜ್ಯ ಕ್ಯಾನ್ಸರ್‌ ಸಂಸ್ಥೆ ಸಂಕೀರ್ಣ ಉದ್ಘಾಟನೆ

Published:
Updated:

ಬೆಂಗಳೂರು: ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಜೂನ್‌ 28 ರಂದು ಕಿದ್ವಾಯಿ ಸಂಸ್ಥೆ ಆವರಣದಲ್ಲಿ ನಿರ್ಮಾಣಗೊಂಡಿರುವ ರಾಜ್ಯ ಕ್ಯಾನ್ಸರ್‌ ಸಂಸ್ಥೆ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.

‘ಬಡ ರೋಗಿಗಳು ಕೂಡ ಅತ್ಯಾಧುನಿಕ ಚಿಕಿತ್ಸೆಯನ್ನು ಪಡೆಯುವ ಉದ್ದೇಶದಿಂದ ಈ ವಿಭಾಗವನ್ನು ತೆರೆಯಲಾಗಿದೆ. ಆಧುನಿಕ ಯಂತ್ರೋಪಕರಣಗಳನ್ನು ಖರೀದಿಸಲು ಹೆಚ್ಚುವರಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 2014ರಲ್ಲಿ ಅನುಮೋದನೆ ಸಿಕ್ಕಿತ್ತು. 20 ರಾಜ್ಯಗಳು ಈ ನೆರವು ಪಡೆದಿವೆ. ಆದರೆ ಇಷ್ಟು ಬೇಗ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವುದು ಕಿದ್ವಾಯಿ ಆಸ್ಪತ್ರೆ ಮಾತ್ರ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಕೆ.ಜಿ ಲಿಂಗೇಗೌಡ ಹೇಳಿದರು.

‘ಈ ಯೋಜನೆಗೆ ₹120 ಕೋಟಿ ಅನುದಾನ ಸಿಕ್ಕಿದೆ. ಇದರಲ್ಲಿ ₹30 ಕೋಟಿ ಸಹಾಯವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಹಣವನ್ನು ರೇಡಿಯೋಥೆರಪಿ ಹಾಗೂ ರೋಬೋಟಿಕ್ ಸರ್ಜರಿಗಾಗಿ ಯಂತ್ರೋಪಕರಣಗಳನ್ನು ಖರೀದಿಸಲು ವಿನಿಯೋಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !