ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ ಕ್ಯಾನ್ಸರ್‌ ಜಾಗೃತಿಗೆ ‘ಪಿಂಕ್‌ ಎಕ್ಸ್‌ಪ್ರೆಸ್‌’

Last Updated 29 ಜೂನ್ 2019, 18:52 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರೋಟರಿ ಪಾಮ್ ವಿಲ್ಲೆ ಹಾಗೂ ಸಕ್ರ ವರ್ಲ್ಡ್‌ ಆಸ್ಪತ್ರೆ ವತಿಯಿಂದ ‘ಪಿಂಕ್‌ ಎಕ್ಸ್‌ಪ್ರೆಸ್‌’ ಸಂಚಾರಿ ಬಸ್‌ ಸೇವೆ ಆರಂಭಿಸಲಾಗಿದೆ.

ರೋಗವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಜೀವ ಉಳಿಸುವ ಆಶಯದೊಂದಿಗೆ ಸಿದ್ಧಪಡಿಸಲಾಗಿರುವ ಈ ಬಸ್‌ನಲ್ಲಿ ಸ್ತನ ಕ್ಯಾನ್ಸರ್ ತಪಾಸಣೆಗೆ ಸುಸಜ್ಜಿತವಾದ ವ್ಯವಸ್ಥೆ ಇದೆ. ತಪಾಸಣೆಗೆ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ರಾಜ್ಯದಾದ್ಯಂತ ಸಂಚರಿಸಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಪಿಂಕ್ ಎಕ್ಸ್‌ಪ್ರೆಸ್‌ ಮೂಲಕ ತಪಾಸಣಾ ಶಿಬಿರವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗುತ್ತದೆ. ಅಗತ್ಯ ಔಷಧಿ ಹಾಗೂ ಪರಿಕರಗಳನ್ನು ‘ರೋಟರಿ ಬೆಂಗಳೂರು’ ಸಂಸ್ಥೆ ಪೂರೈಸಲಿದೆ. ಸಕ್ರ ವರ್ಲ್ಡ್‌ ಆಸ್ಪತ್ರೆ ತಪಾಸಣಾ ಶಿಬಿರ ನಡೆಸಿಕೊಡಲಿದೆ.

ರೋಟರಿ ಪಾಮ್‍ವಿಲ್ಲೆ ಅಧ್ಯಕ್ಷ ರಿತೇಶ್ ಗೋಯಲ್‌ ಹಾಗೂ ಸಕ್ರ ವರ್ಲ್ಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ತಕಾಶಿ ಮಾಕಿ ಅವರು ಚಾಲನೆ ನೀಡಿದರು. ‘ಸ್ಪರ್ಶರಹಿತ, ನೋವು ರಹಿತ ತಪಾಸಣೆಗಾಗಿ ಸ್ಕ್ರೀನಿಂಗ್ ಥರ್ಮಲ್ ಇಮೇಜಿಂಗ್’ ತಂತ್ರಜ್ಞಾನವನ್ನು ಬಸ್‌ನಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗಿಯಾಗಬೇಕು’ ಎಂದು ಗೋಯಲ್‌ ತಿಳಿಸಿದರು.

‘ದೇಶದ ಮಹಿಳೆಯರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಸ್ತನ ಕ್ಯಾನ್ಸರ್. ಅರಿವಿನ ಕೊರತೆಯೇ ಇದಕ್ಕೆ ಕಾರಣ’ ಎಂದು ತಕಾಶಿ ಮಾಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT