ಮಂಗಳವಾರ, ಫೆಬ್ರವರಿ 18, 2020
17 °C

ಇಂಗಾಲ ಡೈ ಆಕ್ಸೈಡ್‌ನಿಂದ ಇಂಧನ ಉತ್ಪಾದನೆ :ಹಿರಿಯ ವಿಜ್ಞಾನಿ ಸಿ.ಎನ್.ಆರ್. ರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಾಹನಗಳು ಹೊರಬಿಡುವ ಇಂಗಾಲದ ಡೈ ಆಕ್ಸೈಡ್‌ ಅನ್ನು ಇಂಧನವಾಗಿ ಮಾರ್ಪಡಿಸಿ ವಾಹನಗಳಿಗೆ ಬಳಸಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುವ ಸವಾಲನ್ನು ನಮ್ಮ ವಿಜ್ಞಾನಿಗಳು ಸ್ವೀಕರಿಸಬೇಕು’ ಎಂದು ಹಿರಿಯ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಬೆಂಗಳೂರು ಇಂಡಿಯಾ ನ್ಯಾನೊ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಗಾಲದ ಡೈ ಆಕ್ಸೈಡ್‌ ಅನ್ನು ಶಕ್ತಿಯ ವಿವಿಧ ಮೂಲವಾಗಿಯೂ ಚೀನಾ ಬಳಸಿಕೊಳ್ಳುತ್ತಿದೆ. ಬೀಜಿಂಗ್‌ನಲ್ಲಿ ಇಂತಹ ಇಂಗಾಲದ ಡೈ ಆಕ್ಸೈಡ್‌ ಸಂಗ್ರಹಿಸುವ ಅಥವಾ ಹೀರಿಕೊಳ್ಳುವ ಟವರ್‌ಗಳನ್ನು ನಿರ್ಮಿಸಲಾಗಿದೆ. ಹೀಗೆ, ಸಂಗ್ರಹವಾಗುವ ಇಂಗಾಲದ ಡೈ ಆಕ್ಸೈಡ್‌ ಅನ್ನು ಇಂಧನವಾಗಿ ಪುನರ್‌ ಬಳಸಲಾಗುತ್ತಿದೆ’ ಎಂದರು. 

‘ದೇಶದಲ್ಲಿ ದೆಹಲಿಯ ನಂತರ ಬೆಂಗಳೂರಿನಲ್ಲಿ ಹೆಚ್ಚು ವಾಯುಮಾಲಿನ್ಯ ಪ್ರಮಾಣ ದಾಖಲಾಗುತ್ತಿದೆ. ಇಂಗಾಲದ ಡೈ ಆಕ್ಸೈಡ್‌ ಸಂಗ್ರಹಿಸಲು ಸಾಧ್ಯವಾದರೆ ಪರಿಸರದ ಮೇಲಿನ ಹಾನಿ ಕಡಿಮೆಯಾಗಲಿದೆ ಮತ್ತು ಇಂಧನ ಕೊರತೆ ಅಲ್ಪವಾದರೂ ನೀಗಲಿದೆ’ ಎಂದು ಹೇಳಿದರು. 

‘ಸಾಮಾನ್ಯ ವಾಹನಗಳಿಗೆ ಎಲೆಕ್ಟ್ರಿಕ್‌ ವಾಹನಗಳು ಪರ್ಯಾಯ ಎಂದು ಹೇಳಲಾಗುತ್ತಿದೆ. ಆದರೆ, ಹೊಸ ಬ್ಯಾಟರಿ ಹಾಕದೆ ಸಾಮಾನ್ಯ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಮಾರ್ಪಡಿಸಲು ಸಾಧ್ಯವಿಲ್ಲ’ ಎಂದರು. 

‘ಲೀಥಿಯಂ, ಕೊಬಾಲ್ಟ್‌ ಮತ್ತು ಆಕ್ಸೈಡ್‌ ಒಳಗೊಂಡಿರುವ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗುತ್ತದೆ. ಕಾಂಗೊದಲ್ಲಿ ಮಾತ್ರ ಕೊಬಾಲ್ಟ್‌ ಉತ್ಪಾದಿಸಲಾಗುತ್ತಿದ್ದು, ಇದಕ್ಕೆ ಹೆಚ್ಚು ಬೇಡಿಕೆ ಇದೆ. ಎಲೆಕ್ಟ್ರಿಕ್‌ ವಾಹನಗಳ ಬಳಕೆಹೆಚ್ಚಿದರೆ ಇದರ ಕೊರತೆ ಕಾಡಬಹುದು. ಹೀಗಾಗಿ, ಸೋಡಿಯಂ ಅಥವಾ ಜಲಜನಕ ಬಳಸಿಕೊಂಡು ಬ್ಯಾಟರಿಗಳನ್ನು ತಯಾರಿಸಲು ಸಾಧ್ಯ. ಈ ನಿಟ್ಟಿನಲ್ಲಿಯೂ ಭಾರತೀಯ ವಿಜ್ಞಾನಿಗಳು ಸಂಶೋಧನೆ ನಡೆಸಬೇಕು’ ಎಂದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು