ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಶಿಶುವಿಗೆ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Last Updated 21 ನವೆಂಬರ್ 2019, 2:46 IST
ಅಕ್ಷರ ಗಾತ್ರ

ಬೆಂಗಳೂರು: ವಸಂತನಗರದ ಮಸೀದಿಯ ಬಳಿ ಅನಾಥವಾಗಿ ಬಿಟ್ಟು ಹೋಗಿದ್ದ ಶಿಶುವಿಗೆ ಭಗವಾನ್ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮಹಾವೀರ ಎಂದು ನಾಮಕರಣ ಮಾಡಲಾಗಿದೆ.

ನ.14ಕ್ಕೆ ಮಸೀದಿ ಬಳಿ ಸಿಕ್ಕ ಶಿಶುವನ್ನುಹೈಗ್ರೌಂಡ್ ಪೊಲೀಸ್ ಸಿಬ್ಬಂದಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು.

2.75 ಕೆ.ಜಿ ತೂಕ ಹೊಂದಿದ್ದ ಗಂಡು ಶಿಶುವಿಗೆ ಕರುಳು ಬಳ್ಳಿ ಕೂಡಾ ಹಾಗೇ ಇತ್ತು. ವೈದ್ಯರುತೀವ್ರ ನಿಗಾ ಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಿದರು. ಶಿಶುವಿನ ತೂಕದಲ್ಲಿ 160 ಗ್ರಾಂ. ಇಳಿಕೆಯಾಗಿತ್ತು.

ಡಾ.ಶಿವಲೀಲಾ ನೇತೃತ್ವದಲ್ಲಿ ವೈದ್ಯರ ತಂಡ ಆರು ದಿನ ಚಿಕಿತ್ಸೆ ನೀಡಿದ ಪರಿಣಾಮ ಶಿಶುವಿನ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿತು.

ತೂಕ ಕೂಡಾ 2.82 ಕೆ.ಜಿ.ಗೆ ಹೆಚ್ಚಳವಾಯಿತು. ಭಗವಾನ್ಮಹಾವೀರ್ ಜೈನ್ ಆಸ್ಪತ್ರೆಯ
ವೈದ್ಯರು ಮಗುವನ್ನುಹೈ ಗ್ರೌಂಡ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT