ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸಾಗ್ರ್ಯಾಂಡ್‌: ₹2 ಸಾವಿರ ಕೋಟಿ ಹೂಡಿಕೆಯ ಉದ್ದೇಶ

Published 29 ಏಪ್ರಿಲ್ 2023, 20:12 IST
Last Updated 29 ಏಪ್ರಿಲ್ 2023, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕಾಸಾಗ್ರ್ಯಾಂಡ್‌ ಸಂಸ್ಥೆಯು ನಗರದ ವಸತಿ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದು, 2024ರ ವೇಳೆಗೆ ₹2 ಸಾವಿರ ಕೋಟಿ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.

ಇತ್ತೀಚೆಗೆ ಕನಕಪುರ ಮುಖ್ಯ ರಸ್ತೆಯಲ್ಲಿ ವಾಸ್ತುಶಿಲ್ಪದ ಮೇರುಕೃತಿ ಎಂದೇ ಬಿಂಬಿಸಲಾದ ಕಾಸಾಗ್ರ್ಯಾಂಡ್ ‘ಝೈಡೆನ್’ ಯೋಜನೆಯನ್ನು ಅನಾವರಣಗೊಳಿಸಲಾಗಿದೆ. ಜೆಪಿ ನಗರದಿಂದ ಕೇವಲ 10 ನಿಮಿಷಗಳಲ್ಲಿ ಇಲ್ಲಿಗೆ ತಲುಪಬಹುದಾಗಿದೆ. ಹೊಚ್ಚ ಹೊಸ ಯೋಜನೆಗಳು ನಗರದ ಇತರ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ. ಒಟ್ಟು 3 ಎಕರೆ 69 ಗುಂಟೆ ಆಸ್ತಿಯಲ್ಲಿ 1 ಎಕರೆ 25 ಗುಂಟೆ ಸೆಂಟ್ರಲ್ ಲ್ಯಾಂಡ್‌ಸ್ಕೇಪ್ ಪೋಡಿಯಂ ಅನ್ನು ನೀಡಲಾಗಿದೆ.

ಸಂಸ್ಥೆಯು 2014ರಲ್ಲಿ ಕಾಸಾಗ್ರ್ಯಾಂಡ್ ಲಕ್ಸಸ್‍ನೊಂದಿಗೆ ಬೆಂಗಳೂರು ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪ್ರವೇಶಿಸಿತು. ನಗರದಲ್ಲಿ 12ಕ್ಕೂ ಹೆಚ್ಚು ಉತ್ಕೃಷ್ಟ ವಸತಿ ಸಮುಚ್ಛಯಗಳನ್ನು ಪ್ರಾರಂಭಿಸಿದೆ. ಈ ವರ್ಷ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್, ಬೇಗೂರು ಸೇರಿ ಅನೇಕ ಸ್ಥಗಳಲ್ಲಿ 25 ಹೊಸ ಉನ್ನತ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬೆಂಗಳೂರು ಮಾರುಕಟ್ಟೆಯಲ್ಲಿ ತನ್ನ ಬಂಡವಾಳವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರು ವಲಯದ ಕಾಸಾಗ್ರ್ಯಾಂಡ್‌ನ ನಿರ್ದೇಶಕರಾದ ಸತೀಶ್ ಸಿ.ಜಿ., ಮಾತನಾಡಿ, ‘ಕಳೆದ ವರ್ಷ ರಿಯಲ್ ಎಸ್ಟೇಟ್ ಮಾರುಕಟ್ಟೆಯು ವಿಶೇಷವಾಗಿ ಬೆಂಗಳೂರು ಮಾರುಕಟ್ಟೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಈ ನಗರವು ವೈವಿಧ್ಯಮಯ ಮನೆ ಖರೀದಿದಾರರನ್ನು ಹೊಂದಿದೆ. ಎಲ್ಲಾ ಯೋಜನೆಗಳು ಸೌಕರ್ಯಗಳು ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಬಹಳ ವಿಭಿನ್ನವಾಗಿದ್ದು, ಕೈಗೆಟುಕುವ ದರದಲ್ಲಿ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT