ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಇಲಾಖೆ ಎಇಇ ವಿರುದ್ಧ ಸಿಬಿಐ ದೂರು

ಅಕ್ರಮ ಆಸ್ತಿ ಹೊಂದಿರುವ ಆರೋಪ
Last Updated 2 ಜುಲೈ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆ, ಹುಬ್ಬಳ್ಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಮೇಶ್‌ ಪ್ರಭಾಕರ ಮಲ್ಕರಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಸಿಬಿಐ ಪ್ರಕರಣ ದಾಖಲಿಸಿದೆ.

ರಮೇಶ್‌ 2013ರ ಜನವರಿಯಿಂದ 2019ರ ಮಾರ್ಚ್‌ 19ರವರೆಗೆ ಆದಾಯ ಮೀರಿ ₹ 82.60 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಎಫ್‌ಐಆರ್‌ ದಾಖಲಿಸಿದೆ. ಈ ಅವಧಿಯಲ್ಲಿ ರಮೇಶ್ ಮಲ್ಕರಿ ಅವರಿಗೆ ₹ 81ಲಕ್ಷ ಆದಾಯ ಬಂದಿದೆ. ಇದರಲ್ಲಿ ಸುಮಾರು ₹ 41ಲಕ್ಷ ಖರ್ಚು ಮಾಡಿದ್ದಾರೆ. ಆರು ವರ್ಷಗಳ ಪರಿಶೀಲನಾ ಅವಧಿಯಲ್ಲಿ ಅವರು ಹೊಂದಿರುವ ಒಟ್ಟು ಆಸ್ತಿಯ ಮೌಲ್ಯ ಸುಮಾರು ₹ 1.32 ಕೋಟಿ ಎಂದು ವಿವರಿಸಲಾಗಿದೆ.

ಆರೋಪಿ ಎಂಜಿನಿಯರ್‌ ಬೆಳಗಾವಿಯ ಹನುಮಾನ್‌ ನಗರದಲ್ಲಿ ₹ 36 ಲಕ್ಷ ಮೌಲ್ಯದ 1650 ಚದರಡಿ ನಿವೇಶನ, ಇದೇ ನಗರದಲ್ಲಿ ಇಷ್ಟೇ ಅಳತೆಯ ನಿವೇಶನದಲ್ಲಿ ಕಟ್ಟಿರುವ ₹ 54 ಲಕ್ಷ ಮೌಲ್ಯದ ಕಟ್ಟಡ, 1363 ಚದರಡಿ ನಿವೇಶನದಲ್ಲಿ 700 ಚದರಡಿ ಕಟ್ಟಡ ಹೊಂದಿರುವ ₹ 17.62 ಲಕ್ಷ ಮೌಲ್ಯದ ಆಸ್ತಿ, ಬೆಳಗಾವಿಯ ಸದಾಶಿವ ನಗರದಲ್ಲಿ ₹ 6.84 ಲಕ್ಷ ಬಾಳುವ 1080 ಚದರಡಿ ನಿವೇಶನವನ್ನು ಹೊಂದಿದ್ದಾರೆ.

ಇದಲ್ಲದೆ, ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್‌ನಲ್ಲಿ ಪ್ರೇಮಲತಾ ರಮೇಶ್‌ ಅವರ ಹೆಸರಿನಲ್ಲಿ ₹ 11 ಲಕ್ಷ ನಗದು, ಇದೇ ಬ್ಯಾಂಕಿನ ಮತ್ತೊಂದು ಖಾತೆಯಲ್ಲಿ ₹ 1.28 ಲಕ್ಷ ಹಣ, ಬೆಳಗಾವಿಯ ಎಸ್‌ಬಿಐನಲ್ಲಿ ರಮೇಶ್‌ ತಮ್ಮ ಹೆಸರಿನಲ್ಲಿ ₹ 4.11 ಲಕ್ಷ ನಗದು ಹಾಗೂ ಇದೇ ಬ್ಯಾಂಕಿನ ಇನ್ನೊಂದು ಖಾತೆಯಲ್ಲಿ ₹ 1 ಲಕ್ಷ ಹಣ ಇಟ್ಟಿದ್ದಾರೆ.

ರಮೇಶ್‌ ಪ್ರಭಾಕರ ಮಲ್ಕರಿ 1992ರಲ್ಲಿ ರೈಲ್ವೆಗೆ ಸೇರಿದ್ದರು. ಮುಂಬೈ ಬಾಂದ್ರಾ, ಹುಬ್ಬಳ್ಳಿ, ಚಿತ್ರದುರ್ಗ, ಬೆಳಗಾವಿಯಲ್ಲಿ ಕೆಲಸ ಮಾಡಿದ್ದರು. 2019ರಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿ ಹುಬ್ಬಳ್ಳಿಗೆ ವರ್ಗವಾಗಿದ್ದರು ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT