ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಸಿಗರೇಟ್: ₹ 62.5 ಲಕ್ಷ ಲಂಚ ಪಡೆದ ಎಸಿಪಿ ಪ್ರಭುಶಂಕರ್‌

Last Updated 9 ಮೇ 2020, 5:00 IST
ಅಕ್ಷರ ಗಾತ್ರ
ADVERTISEMENT
"ಪ್ರಭುಶಂಕರ್"

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ವೇಳೆ ಸಿಗರೇಟ್‌ ಸರಬರಾಜಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಪ್ರತಿಷ್ಠಿತ ಕಂಪನಿಗಳ ವಿತರಕರಿಂದ ₹62.5ಲಕ್ಷಲಂಚಪಡೆದು ಸಿಕ್ಕಿಕೊಂಡ ಸಿಸಿಬಿಎಸಿಪಿಪ್ರಭುಶಂಕರ್‌ ₹ 25ಲಕ್ಷಹಣವನ್ನು ಹಿರಿಯ ಅಧಿಕಾರಿಗಳಿಗೆ ತಂದೊಪ್ಪಿಸಿದ ಪ್ರಕರಣ ನಡೆದಿದೆ.

ಪ್ರಭುಶಂಕರ್

ಈ ಭಾರಿಲಂಚಪ್ರಕರಣ ಕುರಿತು ವಿಚಾರಣೆ ನಡೆಸಿದ ಸಿಸಿಬಿ ಡಿಸಿಪಿ ರವಿ ಕುಮಾರ್‌ ಅವರು,ಎಸಿಪಿಪ್ರಭುಶಂಕರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಎಂಟು ಪುಟಗಳ ವರದಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರತಿಷ್ಠಿತ ಕಂಪನಿಗಳ ಸಿಗರೇಟ್‌ ವಿತರಕರು ಲಾಕ್‌ಡೌನ್‌ ಸಮಯದಲ್ಲಿ ತಮ್ಮ ವ್ಯವಹಾರಕ್ಕೆ ಧಕ್ಕೆಯಾಗದಂತೆ ಪೊಲೀಸ್‌ ಇಲಾಖೆಯಲ್ಲಿ ‘ವ್ಯವಸ್ಥೆ’ ಮಾಡಲು ಪ್ರಭುಶಂಕರ್‌ ಅವರನ್ನು ಸಂಪರ್ಕಿಸಿದರು. ‘ಇಡೀ ಇಲಾಖೆಯ ಹೊಣೆಯನ್ನು ನಾನು ಹೊರುತ್ತೇನೆ’ ಎಂದು ಹೇಳಿ ₹62.5ಲಕ್ಷಲಂಚಕ್ಕೆ ವ್ಯವಹಾರ ಕುದುರಿಸಿದರು ಎಂದು ಮೂಲಗಳು ವಿವರಿಸಿವೆ.

ಬಾಬು, ರಾಜೇಂದ್ರ ಪ್ರಸಾದ್‌ ಮತ್ತು ಭೂಷಣ್‌ ಎಂಬುವವರಿಂದಎಸಿಪಿ ಏಪ್ರಿಲ್‌ 22ರಂದು ₹ 32.5ಲಕ್ಷಪಡೆದರು. ಅನಂತರ ಏಪ್ರಿಲ್‌ 30ರಂದು ₹ 30ಲಕ್ಷ ಪಡೆದರು. ಈ ಮಧ್ಯೆ, ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನ್‌ ಸಿಬ್ಬಂದಿ ಜತೆ ಎಂ.ಡಿ ಸನ್ಸ್‌ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ ಇಲಾಖೆಗೆಲಂಚಕೊಟ್ಟ ವಿಷಯ ಬಹಿರಂಗವಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ಪ್ರಭುಶಂಕರ್‌ ಪ್ರಕರಣದ ತನಿಖೆಯನ್ನು ತಾವೇ ವಹಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ಇದಕ್ಕೆ ಸೊಪ್ಪು ಹಾಕದ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಸಿಸಿಬಿ ರೌಡಿ ದಳಕ್ಕೆ ಒಪ್ಪಿಸಿದರು. ಈ ಪ್ರಕರಣ ಕುರಿತು ರವಿಕುಮಾರ್ ‌ ವಿಚಾರಣೆ ಆರಂಭಿಸುತ್ತಿದ್ದಂತೆ ₹ 25 ಲಕ್ಷವನ್ನು ಪ್ರಭುಶಂಕರ್‌ ತಂದೊಪ್ಪಿಸಿದ್ದಾರೆ. ಮಿಕ್ಕ ಹಣವನ್ನು ವಸೂಲು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ರವಿಕುಮಾರ್‌ ಅವರು ಕೊಟ್ಟಿರುವ ವರದಿಯನ್ನು ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಅವರಿಗೆ ಕಳುಹಿಸಿದ್ದಾರೆ. ಅಲ್ಲಿಂದ ಅದು ಡಿಜಿಪಿ ಪ್ರವೀಣ್‌ ಸೂದ್‌ ಅವರಿಗೆ ರವಾನೆಯಾಗಲಿದೆ. ಸರ್ಕಾರಿ ಜೀಪಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯವನ್ನು ಬಿಡಲು ಎಲೆಕ್ಟ್ರಾನಿಕ್‌ ಸಿಟಿಎಸಿಪಿವಾಸುಲಂಚ‍ಪಡೆದು ಸಿಕ್ಕಿಕೊಂಡ ಬೆನ್ನಲ್ಲೇ ಸಿಗರೇಟ್‌ಲಂಚಪ್ರಕರಣ ಬಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT