ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ಡ್ರಗ್ಸ್‌ ಮಾರಲು ಸಜ್ಜು: ನಾಲ್ವರ ಬಂಧನ

₹1.15 ಕೋಟಿ ಮೌಲ್ಯದ ಹಶಿಶ್‌ ಆಯಿಲ್‌, ಗಾಂಜಾ ಜಪ್ತಿ
Last Updated 16 ಡಿಸೆಂಬರ್ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಮಾದಕ ವಸ್ತುಗಳಾದ ಹಶಿಶ್‌ ಆಯಿಲ್‌ ಹಾಗೂ ಗಾಂಜಾ ಮಾರಲು ಸಜ್ಜಾಗಿದ್ದ ನಾಲ್ವರು ಅಂತರರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆಂಪಾಪುರದ ಎಂ.ತಿರುಪಾಲ್‌ ರೆಡ್ಡಿ (32), ಆರ್‌.ಟಿ.ನಗರದ ಕಮಲೇಶನ್‌ (31), ತಮಿಳುನಾಡಿನ ಕೃಷ್ಣಗಿರಿಯ ಸತೀಶ್‌ (27) ಹಾಗೂ ಏಜಾಜ್‌ ಪಾಷಾ (45) ಬಂಧಿತರು.

‘ಬಂಧಿತರಿಂದ ₹1.15 ಕೋಟಿ ಮೌಲ್ಯದ ಐದು ಕೆ.ಜಿಯಷ್ಟು ಹಶಿಶ್‌ ಆಯಿಲ್‌ ಹಾಗೂ 3.3 ಕೆ.ಜಿ ಗಾಂಜಾ, ನಾಲ್ಕು ಮೊಬೈಲ್, ಕಾರು, ಬೈಕ್‌ ಹಾಗೂ ಐದು ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದುಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ ತಿಳಿಸಿದರು.

ಕೆಂಪಾಪುರದ ವೆಂಕಟೇಗೌಡ ಬಡಾವಣೆಯ ಮನೆಯೊಂದರಲ್ಲಿ ಆರೋಪಿಗಳು ಮಾದಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಮಾಹಿತಿ ಆಧರಿಸಿ ದಾಳಿ ಮಾಡಿದಾಗ, ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.

ಹೊಸ ವರ್ಷದ ಆಚರಣೆ ವೇಳೆ ಮೋಜಿನಲ್ಲಿ ತೊಡಗುವ ಕಾಲೇಜು ಯುವಕರು ಹಾಗೂ ಗಿರಾಕಿಗಳಿಗೆ ಡ್ರಗ್ಸ್‌ ಪೂರೈಸಲು ಯೋಜನೆ ರೂಪಿಸಿದ್ದ ಆರೋಪಿಗಳು, ಎರಡು ವಾರ ಮುನ್ನವೇ ಮನೆಯಲ್ಲಿಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಆರೋಪಿಗಳ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT