ಮೀಟರ್‌ ಬಡ್ಡಿ ದಂಧೆಕೋರರಿಗೆ ಸಿಸಿಬಿ ಶಾಕ್

7

ಮೀಟರ್‌ ಬಡ್ಡಿ ದಂಧೆಕೋರರಿಗೆ ಸಿಸಿಬಿ ಶಾಕ್

Published:
Updated:
Deccan Herald

ಬೆಂಗಳೂರು: ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಒಂಬತ್ತು ಮಂದಿಯನ್ನು ಬಂಧಿಸಿ ₹ 69 ಲಕ್ಷ ಮೌಲ್ಯದ ನಗದು, 258 ಚೆಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ನೇತೃತ್ವದಲ್ಲಿ ಸಿಸಿಬಿಯ ಹತ್ತು ತಂಡಗಳು ಬೆಳಿಗ್ಗೆ 6 ಗಂಟೆಗೇ ಕಾರ್ಯಾಚರಣೆಗೆ ಇಳಿದವು. ಕಾಮಾಕ್ಷಿಪಾಳ್ಯ, ಮೈಕೊಲೇಔಟ್, ಜಯನಗರ, ಸಿಟಿ ಮಾರ್ಕೆಟ್, ಹನುಮಂತನಗರ, ಬ್ಯಾಟರಾಯನಪುರ ಹಾಗೂ ಚಂದ್ರಲೇಔಟ್‌ ಠಾಣೆಗಳ ವ್ಯಾಪ್ತಿಯಲ್ಲಿ ಬಡ್ಡಿ ವ್ಯವಹಾರ ನಡೆಸುವವರ ಮನೆಗಳಲ್ಲಿ ಶೋಧ ನಡೆಸಿ ನಗದು ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಯಿತು.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಇತ್ತೀಚೆಗೆ ಕೆ.ಆರ್.ಮಾರುಕಟ್ಟೆ ಪರಿವೀಕ್ಷಣೆಗೆ ತೆರಳಿದ್ದಾಗ, ಮೀಟರ್ ಬಡ್ಡಿ ದಂಧೆಕೋರರಿಂದ ತಮಗಾಗುತ್ತಿರುವ ಕಿರುಕುಳದ ಬಗ್ಗೆ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದರು. ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಉಪಮುಖ್ಯಮಂತ್ರಿ, ಬಡ್ಡಿಕೋರರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್‌ಗೆ ಸೂಚನೆ ಕೊಟ್ಟಿದ್ದರು.

‘ಭಾಸ್ಕರ್, ಮಂಜುನಾಥ್ ಅಲಿಯಾಸ್ ಮಿರಾಕಲ್, ವೇಲು ಅಲಿಯಾಸ್ ಮಾರ್ಕೆಟ್ ವೇಲು, ಸುಬ್ರಹ್ಮಣಿ, ಸತೀಶ್, ಜಯಮ್ಮ, ಕೃಷ್ಣಮ್ಮ, ವೆಂಕಟೇಶ್, ಲಿಂಗರಾಜು ಎಂಬುವರನ್ನು ಬಂಧಿಸಿದ್ದೇವೆ. ಇವರು ತಿಂಗಳಿಗೆ ಶೇ 5 ರಿಂದ ಶೇ 15ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದರು’ ಎಂದು ಕಮಿಷನರ್ ಟಿ.ಸುನೀಲ್‌ಕುಮಾರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !