ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಸೇವನೆ: ನಟಿಯರ ಮುಂದುವರಿದ ವಿಚಾರಣೆ

Last Updated 13 ಸೆಪ್ಟೆಂಬರ್ 2020, 19:38 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಸಿಸಿಬಿ ಪೊಲೀಸರ ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡಿರುವುದಾಗಿ ಮೂಲಗಳು ತಿಳಿಸಿವೆ.

'ಮಡಿವಾಳದಲ್ಲಿರುವ ತನಿಖಾ ಘಟಕದಲ್ಲಿ ಇಬ್ಬರು ನಟಿಯರ ವಿಚಾರಣೆ ಭಾನುವಾರ ನಡೆಯಿತು. ಸಿಸಿಬಿ ಅಧಿಕಾರಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಶ್ರೀಧರ್ ಪೂಜಾರ್ ವಿಚಾರಣೆ ನಡೆಸಿದರು.

'ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಇಬ್ಬರು ನಟಿಯರೂ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ, ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಸಂಬಂಧ ಪ್ರಶ್ನೆ ಕೇಳಿದಾಗ ಮೌನ ವಹಿಸಿದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ವಿರೇನ್ ಖನ್ನಾ ಹಾಗೂ ಆದಿತ್ಯ ಅಗರವಾಲ್ ಜತೆಗಿನ ಸಂಪರ್ಕ ಕುರಿತು ಅಧಿಕಾರಿಗಳು ಕೇಳಿದ ಪ್ರಶ್ನೆಗೆ,'ವಿರೇನ್ ಖನ್ನಾ ಆಯೋಜನೆ ಮಾಡುತ್ತಿದ್ದ ಹಲವು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದೆವು. ಅಲ್ಲಿಂದ ವಾಪಸ್ ಆದ ಬಳಿಕ ಅಲ್ಲಿ ಏನು ನಡೆಯುತ್ತಿತ್ತು ಎಂಬುದು ಗೊತ್ತಿಲ್ಲ' ಎಂದು ಇಬ್ಬರೂ ಉತ್ತರಿಸಿದ್ದಾರೆ. ಡ್ರಗ್ಸ್ ಸೇವನೆ ಬಗ್ಗೆ ಪ್ರತ್ಯೇಕವಾಗಿ ಕೇಳಿದಾಗ ಇಬ್ಬರಿಂದಲೂ ಉತ್ತರ ಬರಲಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT