ಐಎಸ್‌ಡಿ ಕರೆಗಳ ಮಾರ್ಪಾಡು; ಆರೋಪಿ ಸೆರೆ

7

ಐಎಸ್‌ಡಿ ಕರೆಗಳ ಮಾರ್ಪಾಡು; ಆರೋಪಿ ಸೆರೆ

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಕ್ಕೆ ಹಾಗೂ ಬಿಎಸ್‌ಎನ್‌ಎಲ್ ಕಂಪನಿಗೆ ನಷ್ಟ ಉಂಟು ಮಾಡುತ್ತಿದ್ದ ಆರೋಪದಡಿ ತಮೀಜ್‍ವುಲ್ಲಾ (38)ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿಸ್ಮಿಲ್ಲಾ ನಗರದ ನಿವಾಸಿಯಾದ ಆರೋಪಿ, ಬಾಂಗ್ಲಾದೇಶದ ‘ಸುಬೋಚ್ ಟೆಲಿಕಾಂ‘ ಕಂಪನಿ ಮಾಲೀಕರ ಜತೆ ಒಡನಾಟವಿಟ್ಟುಕೊಂಡು ಕೃತ್ಯ ಎಸಗುತ್ತಿದ್ದ. ಆತನ ಮನೆ ಮೇಲೆ ಬುಧವಾರ ಮಧ್ಯಾಹ್ನ ದಾಳಿ ನಡೆಸಿ 2 ಗೇಟ್‌ವೇ, 64 ಸಿಮ್‌ ಕಾರ್ಡ್‌ಗಳು, ಕಂಪ್ಯೂಟರ್, ಮೊಬೈಲ್‌ ಹಾಗೂ ಕೇಬಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

‘ಅನಿಯಮಿತ ಕರೆ ಸೌಲಭ್ಯವಿರುವ (ಅನ್‌ಲಿಮಿಟೆಡ್) ಬಿಎಸ್‌ಎನ್‌ಎಲ್‌ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿದ್ದ ಆರೋಪಿ, ಎಫ್‌ಸಿಟಿ ಬಾಕ್ಸ್, ಮೋಡಮ್‌, ರೂಟರ್‌ ಮತ್ತಿತರ ಉಪಕರಣಗಳನ್ನು ಬಳಸಿ ಐಎಸ್‌ಡಿ ಕರೆಗಳನ್ನು ಎಸ್‌ಟಿಡಿಗೆ ಪರಿವರ್ತಿಸುತ್ತಿದ್ದ. ಇದರಿಂದ ವಿದೇಶಿ ಕರೆಗಳಿಗೂ ಎಸ್‌ಟಿಡಿ ದರವೇ ಅನ್ವಯಿಸುತ್ತಿತ್ತು’ ಎಂದು ಮಾಹಿತಿ ನೀಡಿದರು.

ಏನಿದು ಎಫ್‌ಸಿಟಿ ಬಾಕ್ಸ್?
ಹಲವು ಸಿಮ್‌ಕಾರ್ಡ್‌ಗಳನ್ನು ಅಳವಡಿಸಿ, ಏಕಕಾಲದಲ್ಲೇ ಆ ಎಲ್ಲ ಸಿಮ್‌ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗುವ ಉಪಕರಣ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್.

ಖಾಸಗಿ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಮತ್ತು ದೂರಸಂಪರ್ಕ ಕಂಪನಿಗಳಲ್ಲಿ ಈ ಬಾಕ್ಸ್‌ಗಳನ್ನು ಬಳಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !