ಗುರುವಾರ , ಆಗಸ್ಟ್ 18, 2022
25 °C
ಅಪ್ರಾಪ್ತ ವಯಸ್ಸಿನವರಿಗೆ ಮದ್ಯ ಮಾರಿದ್ದಕ್ಕೆ ಎಫ್‌ಐಆರ್

ಅಪ್ರಾಪ್ತ ವಯಸ್ಸಿನವರಿಗೆ ಮದ್ಯ: ಸೋಷಿಯಲ್ ಬಾರ್ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚರ್ಚ್‌ಸ್ಟ್ರೀಟ್‌ನಲ್ಲಿರುವಸೋಷಿಯಲ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರುತ್ತಿದ್ದ ಆರೋಪದಡಿ ವ್ಯವಸ್ಥಾಪಕ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

‘ಸೋಷಿಯಲ್ ಬಾರ್‌ನಲ್ಲಿ ಹಲವು ದಿನಗಳಿಂದ ಅಪ್ರಾಪ್ತ ವಯಸ್ಸಿನ ವರಿಗೆ ಮದ್ಯ ಮಾರುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಜೂನ್ 24ರಂದು ಸಂಜೆ ಬಾರ್ ಮೇಲೆ ದಾಳಿ ಮಾಡಿ ಪುರಾವೆ ಸಮೇತ ಅಕ್ರಮವನ್ನು ಪತ್ತೆ ಮಾಡಲಾಯಿತು. ವ್ಯವಸ್ಥಾಪಕ ಓಂ ಪ್ರಕಾಶ್, ಸಿಬ್ಬಂದಿ ಪ್ರಭಾಸ್ ಹಾಗೂ ರಾಕೇಶ್ ದೇವನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಿಸಿಬಿ ಮೂಲ ಗಳು ಹೇಳಿವೆ.

‘ವಶಕ್ಕೆ ಪಡೆದಿರುವ ಆರೋಪಿಗಳು ಹಾಗೂ ಮದ್ಯ ಮಾರಾಟಕ್ಕೆ ಪರವಾನಗಿ ಪಡೆದಿದ್ದ ಉಮೇಶ್ ಶೆಟ್ಟಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದೂ ತಿಳಿಸಿವೆ.

ಇಬ್ಬರು ಬಾಲಕರು ಪತ್ತೆ: ‘21 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ಮದ್ಯ ಸರಬರಾಜು ಮಾಡುವುದು ಅಬಕಾರಿ ಕಾಯ್ದೆ ಪ್ರಕಾರ ನಿಯಮ ಬಾಹಿರ. ಇದು ಗೊತ್ತಿದ್ದರೂ ಸೋಷಿ ಯಲ್ ಬಾರ್‌ನಲ್ಲಿ ಚಿಕ್ಕ ವಯಸ್ಸಿನವರಿಗೆ ಮದ್ಯ ಸರಬರಾಜು ಮಾಡಲಾಗುತ್ತಿತ್ತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ದಾಳಿ ವೇಳೆ ಗ್ರಾಹಕರ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಲಾಯಿತು. 19 ವರ್ಷದ ಬಾಲಕ ಹಾಗೂ ಬಾಲಕಿ ಪತ್ತೆಯಾದರು. ಆರೋಪಿಗಳು ಅವರಿಗೆ ಮದ್ಯ ಸರಬರಾಜು ಮಾಡಿದ್ದರು’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು