ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಾ ರಿಕ್ರಿಯೇಷನ್ ಕ್ಲಬ್‍ ಮೇಲೆ ದಾಳಿ

Last Updated 10 ಆಗಸ್ಟ್ 2019, 19:25 IST
ಅಕ್ಷರ ಗಾತ್ರ

ಬೆಂಗಳೂರು: ಸಿಟಿ ಮಾರ್ಕೆಟ್ ಬಳಿಯ ಕಿಲಾರಿ ರಸ್ತೆಯಲ್ಲಿರುವವಿಜಯಾ ರಿಕ್ರಿಯೇಷನ್ ಕ್ಲಬ್‍ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದ 58 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ಸದಸ್ಯರಲ್ಲದ ವ್ಯಕ್ತಿಗಳು ಕ್ಲಬ್‌ಗೆ ಬಂದು ಜೂಜಾಟದಲ್ಲಿ ತೊಡಗಿದ್ದರು. ಆ ಬಗ್ಗೆ ಬಂದ ಮಾಹಿತಿ ಆಧರಿಸಿ ಕ್ಲಬ್‌ ಮೇಲೆ ದಾಳಿ ಮಾಡಲಾಯಿತು. ₹ 1.01 ಲಕ್ಷ ನಗದನ್ನೂ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕ್ಲಬ್‌ ಮಾಲೀಕ ಪ್ರಕಾಶ್ ಹಾಗೂ ಕ್ಯಾಶಿಯರ್ ಎನ್‌.ಎಂ. ನಾಗಣ್ಣ ಸೇರಿದಂತೆ 58 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT