ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ದಾಳಿ: 104 ಮಹಿಳೆಯರ ರಕ್ಷಣೆ

Last Updated 26 ಜುಲೈ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮವಾಗಿ ಲೈವ್ ಬ್ಯಾಂಡ್ ನಡೆಸುತ್ತಿದ್ದ ನಗರದ ಎರಡು ಬಾರ್‌ ಆ್ಯಂಡ್ ರೆಸ್ಟೊರೆಂಟ್ ಮೇಲೆ ಗುರುವಾರ ರಾತ್ರಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, 104 ಮಹಿಳೆಯರನ್ನು ರಕ್ಷಿಸಿದ್ದಾರೆ.

‘ಅಶೋಕನಗರ ಠಾಣಾ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿರುವ ‘ಪೇಜ್‌–3’ ಹಾಗೂಎಸ್‍.ಜೆ.ಪಾರ್ಕ್ ಠಾಣೆ ವ್ಯಾಪ್ತಿಯ ನರಸಿಂಹರಾಜ ರಸ್ತೆಯಲ್ಲಿರುವ ‘ಲವರ್ಸ್ ನೈಟ್’ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ ಮಹಿಳೆಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

‘ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ಮಹಿಳೆಯರನ್ನು ಕರೆತಂದಿದ್ದಬಾರ್ ಆ್ಯಂಡ್ ರೆಸ್ಪೊರೆಂಟ್‌ನವರು, ಅವರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ದಾಳಿ ವೇಳೆ ಎರಡೂ ಕಡೆಯಲ್ಲೂ ಕೆಲಸಗಾರರು ಹಾಗೂ ಗ್ರಾಹಕರು ಸೇರಿ 52 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ₹ 2.12 ಲಕ್ಷ ನಗದು ಹಾಗೂ ಸಂಗೀತ ಪರಿಕರಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಪೇಜ್‌–3’ ಬಾರ್ ಆ್ಯಂಡ್ ರೆಸ್ಪೊರೆಂಟ್ ಮಾಲೀಕ ಗೋವಿಂದರಾಜು, ಮೇಲ್ವಿಚಾರಕರಾದ ಪ್ರಶಾಂತ್, ಪ್ರವೀಣ್ ಮತ್ತು ಸುನೀತಾ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.

ತುಂಡು ಬಟ್ಟೆ ತೊಡಿಸುತ್ತಿದ್ದರು: ‘ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದಿದ್ದ‘ಲವರ್ಸ್ ನೈಟ್’ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ನವರು, ಬಾರ್‌ ಗರ್ಲ್‌ಗಳಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರಿಗೆಲ್ಲ ತುಂಡು ಬಟ್ಟೆಗಳನ್ನು ತೊಡಿಸಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.

‘ದಾಳಿ ವೇಳೆ ‘ಲವರ್ಸ್ ನೈಟ್’ನವ್ಯವಸ್ಥಾಪಕ ಸದಾನಂದ ಪೂಜಾರಿ ಹಾಗೂ ಕ್ಯಾಷಿಯರ್ ಬಾಲಕೃಷ್ಣ ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ. ಮಾಲೀಕರಾದ ಯತೀಶ್ ಚಂದ್ರಶೆಟ್ಟಿ, ನರೇಂದ್ರ ಬಾಬು ಹಾಗೂ ಕಟ್ಟಡದ ಮಾಲೀಕ ಸುಧೀಂದ್ರ ಬಾಬು ತಲೆಮರೆಸಿಕೊಂಡಿದ್ದಾರೆ. ಅವರೆಲ್ಲರ ವಿರುದ್ಧ ಎಸ್‌.ಜೆ. ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT