ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಪ್ತರಿಗೆ ಮದ್ಯ: ಬಾರ್‌ಗಳ ಮೇಲೆ ಪೊಲೀಸರ ದಾಳಿ

Last Updated 2 ಅಕ್ಟೋಬರ್ 2022, 22:27 IST
ಅಕ್ಷರ ಗಾತ್ರ

ಬೆಂಗಳೂರು: ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಳಿ ಮಾಡಿದ್ದು, ಅಬಕಾರಿ ಕಾಯ್ದೆ ನಿಯಮ ಉಲ್ಲಂಘಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಬೋತೈ, ಐಕಿಗೈ ಹಾಗೂ ಸ್ಕೈ ಬಾರ್ ಮೇಲೆ ಶನಿವಾರ ರಾತ್ರಿ ದಾಳಿ ಮಾಡಲಾಯಿತು. ಬಾರ್ ಮಾಲೀಕರು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಪ್ರಾಪ್ತರಿಗೆ ಮದ್ಯ ಮಾರುವುದು ಕಾನೂನು ಬಾಹಿರ. ಇದು ಗೊತ್ತಿದ್ದರೂ ಬಾರ್‌ಗಳಲ್ಲಿ ವಯಸ್ಸಿನ ದಾಖಲೆ ಪರಿಶೀಲನೆ ನಡೆಸದೇ ಅಪ್ರಾಪ್ತರಿಗೆ ಮದ್ಯ ಮಾರಲಾಗುತ್ತಿತ್ತು. ಕೆಲ ಬಾರ್‌ಗಳು ಅವಧಿ ಮೀರಿ ತೆರೆದಿದ್ದವು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT