ಮಂಗಳವಾರ, ಮಾರ್ಚ್ 2, 2021
19 °C

ಆನ್‌ಲೈನ್‌ ಸಾಲ‌: ಆ್ಯಪ್‌ಗಳ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ್ಯಪ್‌ಗಳ ಮುಖಾಂತರ ಅಕ್ರಮವಾಗಿ ಆನ್‌ಲೈನ್‌ ಸಾಲ ನೀಡುವುದಾಗಿ ಜನರನ್ನು ವಂಚಿಸಿ, ಕಿರುಕುಳ ನೀಡುತ್ತಿರುವ ಆರೋಪದಡಿ ಸಾಲದ ಆ್ಯ‍ಪ್‌ಗಳ ವಿರುದ್ಧ ಸಿಸಿಬಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಆನ್‌ಲೈನ್‌ ಮೂಲಕ ಈ ರೀತಿ ಆ್ಯಪ್‌ಗಳ ಮುಖಾಂತರ ಅಕ್ರಮವಾಗಿ ಸಾಲ ನೀಡುವುದು ಹಾಗೂ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಸಿಬಿ ಎಚ್ಚರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ,‘ಆನ್‌ಲೈನ್‌ ಆ್ಯಪ್‌ಗಳ ಮುಖಾಂತರ ಜನರಿಗೆ ಹೆಚ್ಚು ಬಡ್ಡಿದರದಲ್ಲಿ ಅಕ್ರಮವಾಗಿ ಸಾಲ ನೀಡಲಾಗುತ್ತಿದೆ. ಬಳಿಕ ಸಾಲ ಮರುಪಾವತಿಸುವಂತೆ ಜನರಿಗೆ ಕಿರುಕುಳ ಮತ್ತು ಜೀವ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಸಂತ್ರಸ್ತರ ಮೊಬೈಲ್‌ ಸಂಖ್ಯೆ, ಫೊಟೊಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು  ಟ್ವೀಟ್‌ ಮಾಡಿದ್ದಾರೆ.

‘ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಆ್ಯಪ್‌ ಕಂಪನಿಗಳ ವಿರುದ್ಧ ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ರೀತಿ ಆನ್‌ಲೈನ್ ಸಾಲಗಾರರಿಂದ ವಂಚನೆಗೆ ಒಳಗಾಗಿದ್ದರೆ, ಸಮೀಪದ ಸೈಬರ್‌ ಕ್ರೈಂ ಠಾಣೆಗಳಲ್ಲಿ ದೂರು ನೀಡಿ’ ಎಂದೂ ಹೇಳಿದ್ದಾರೆ.

ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ, ಕೆಲವು ಆ್ಯಪ್‌ಗಳು ಸಾಲ ನೀಡುತ್ತಿದ್ದವು. ಸಾಲ ಮರುಪಾವತಿ ವೇಳೆ ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಹೆಚ್ಚಾಗಿ ಕೇಳಿ ಬಂದಿದ್ದರಿಂದ ಸಿಸಿಬಿ ತನಿಖೆ ಕೈಗೆತ್ತಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು