ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಆರೈಕೆ ಕೇಂದ್ರ: ಜಟಾಪಟಿ ಅಂತ್ಯ

Last Updated 24 ಜುಲೈ 2020, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬಿಐಇಸಿಯಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ಮಂಚ, ಕುರ್ಚಿ ಖರೀದಿ ವಿಷಯದಲ್ಲಿ ಬಿಬಿಎಂಪಿ ಮತ್ತು ಗುತ್ತಿಗೆದಾರರ ನಡುವಿನ ಜಟಾಪಟಿ ಅಂತ್ಯವಾಗಿದ್ದು, ಇನ್ನೆರಡು ದಿನಗಳಲ್ಲಿ ಇಲ್ಲಿ 5 ಸಾವಿರ ಸೋಂಕಿತರಿಗೆ ಚಿಕಿತ್ಸೆ ಲಭ್ಯವಾಗುವ ಸಾಧ್ಯತೆ ಇದೆ.

‘ಕಬ್ಬಿಣದ ಮಂಚ, ಹಾಸಿಗೆ, ಫ್ಯಾನ್, ಬಕೆಟ್, ಮಗ್, ಬಿಸಿ ಮತ್ತು ತಣ್ಣನೆ ನೀರು ಪೂರೈಸುವ ಯಂತ್ರ ಸೇರಿ ಒಂದು ಸೆಟ್‌ಗೆ ₹4,800 ದರ ನಿಗದಿ ಮಾಡಲಾಗಿದೆ. ಒಪ್ಪಂದಕ್ಕೆ ಸಹಿ ಕೂಡ ಮಾಡಲಾಗಿದೆ. ಇನ್ನು ಮುಂದೆ ವಿಳಂಬ ಆಗುವುದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದರು.

ಈ ಹಿಂದೆ 26 ಸಲಕರಣೆಗಳನ್ನು ದಿನಕ್ಕೆ ₹800 ಬಾಡಿಗೆ ದರದಲ್ಲಿ ಪಡೆಯಲು ಬಿಬಿಎಂಪಿ ಮುಂದಾಗಿತ್ತು. ಮುಖ್ಯಮಂತ್ರಿ ಸೂಚನೆ ಮೇರೆಗೆ ಅವುಗಳನ್ನು ಖರೀದಿ ಮಾಡಲು ಪಾಲಿಕೆ ನಿರ್ಧರಿಸಿತ್ತು. ಆದರೆ, ಗುತ್ತಿಗೆದಾರರು ₹7,500 ದರ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT