ಭಾನುವಾರ, ಆಗಸ್ಟ್ 14, 2022
20 °C

ಸೆಂಟ್ರಲ್‌ ಕಾಲೇಜು: ಹಲವು ಪದವಿ ಕೋರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ 2022–23ನೇ ಶೈಕ್ಷಣಿಕ ವರ್ಷದಿಂದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಪದವಿ ಹಂತದ ಕೋರ್ಸ್‌ ಗಳನ್ನು ಆರಂಭಿಸಲು ತೀರ್ಮಾನಿ ಸಲಾಗಿದೆ.

‘ಸೆಂಟ್ರಲ್‌ ಕಾಲೇಜಿನ ಗತವೈಭವ ವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಆಶೋತ್ತರಗಳಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಕುಲಪತಿ ಪ್ರೊ. ಲಿಂಗರಾಜ ಗಾಂಧಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಂಟ್ರಲ್‌ ಕಾಲೇಜು ಆವರಣದಲ್ಲಿನ ಬಿಎ(ಬೇಸಿಕ್‌/ಆನರ್ಸ್‌) ಕೋರ್ಸ್‌ನಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಫ್ರೆಂಚ್‌, ಜರ್ಮನ್‌ ಭಾಷೆಗಳನ್ನು ಅಧ್ಯಯನ ಮಾಡಬಹುದಾಗಿದೆ. ಕನ್ನಡ, ಇಂಗ್ಲಿಷ್‌, ಫ್ರೆಂಚ್‌, ಇತಿ ಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ವಿಷಯ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದಿದ್ದಾರೆ.

ಜತೆಗೆ, ಬಿಎಸ್‌ಡಬ್ಲ್ಯೂ(ಬೇಸಿಕ್‌/ಆನರ್ಸ್‌), ಬಿ.ಎಸ್ಸಿ. ಅಥವಾ ಎಂ.ಎಸ್ಸಿ ಇಂಟಿಗ್ರೇಟೆಡ್‌ ಕೋರ್ಸ್‌ ಹಾಗೂ ಬಿ.ಎಸ್ಸಿ (ಬೇಸಿಕ್‌/ಆನರ್ಸ್‌) ಮತ್ತು ಬಿ.ಕಾಂ. (ಬೇಸಿಕ್‌/ಆನರ್ಸ್‌) ಕೋರ್ಸ್‌ಗಳು ಲಭ್ಯ ಎಂದು ವಿವರಿಸಿದ್ದಾರೆ.

ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಈಗಾಗಲೇ ಕಳೆದ ವರ್ಷದಿಂದ ವಿಶ್ವವಿದ್ಯಾಲಯದ ಮಹಿಳಾ ಕಾಲೇಜು ಆರಂಭಿಸಲಾಗಿದೆ.

ಈ ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ಸಂಸ್ಕೃತ ಮತ್ತು ಹಿಂದಿ ವಿಷಯಗಳು ಹಾಗೂ ಬಿ.ಕಾಂ. (ಬೇಸಿಕ್‌/ಹಾನರ್ಸ್‌) ಪದವಿ, ಬಿ.ಎಸ್ಸಿ (ಬೇಸಿಕ್‌/ಹಾನರ್ಸ್‌) ಪದವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌, ಭೌತವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ, ಭೂಗೋಳ ವಿಜ್ಞಾನ ವಿಷಯಗಳು ಮತ್ತು ಬಿವಿಎ ಕೋರ್ಸ್‌ನಲ್ಲಿ (ಬೇಸಿಕ್‌/ಹಾನರ್ಸ್‌) ಅನಿಮೇಷನ್‌ ಮತ್ತು ಗ್ರಾಫಿಕ್‌ ಡಿಸೈನ್‌, ಬಿ.ಎ (ಬೇಸಿಕ್‌/ಹಾನರ್ಸ್‌) ಪದವಿಯಲ್ಲಿ ಕನ್ನಡ, ಇಂಗ್ಲಿಷ್‌, ಕಮ್ಯೂನಿಕೇಟಿವ್‌ ಇಂಗ್ಲಿಷ್‌, ಫ್ರೆಂಚ್‌, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳು ಹಾಗೂ ಬಿಸಿಎ (ಬೇಸಿಕ್‌/ಹಾನರ್ಸ್‌) ಕೋರ್ಸ್‌ ಗಳು ಲಭ್ಯ ಎಂದು ತಿಳಿಸಿದ್ದಾರೆ.

ಆಸಕ್ತರು ಹೆಚ್ಚಿನ ವಿವರಗಳಿಗೆ www.bcu.ac.in ಹಾಗೂ ಆನ್‌ಲೈನ್‌ ನೋಂದಣಿ ಮತ್ತು ಅರ್ಜಿ ಸಲ್ಲಿಕೆಗಾಗಿ https://uucms.karnataka.gov.in ಭೇಟಿ ನೀಡಬಹುದು. ಜೂನ್‌ 18ರಿಂದಲೇ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು