ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದು ವಿಪಕ್ಷಗಳು: ಸದಾನಂದ ಗೌಡ

Last Updated 23 ಮೇ 2021, 20:44 IST
ಅಕ್ಷರ ಗಾತ್ರ

ಪೀಣ್ಯ ದಾಸಹರಳ್ಳಿ: ‘ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ ಜನರಲ್ಲಿ ಸಂಶಯದ ವಾತಾವರಣ ಉಂಟುಮಾಡಿದ್ದು ವಿಪಕ್ಷಗಳು’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹರಿಹಾಯ್ದರು.

ಹಾವನೂರು ಬಡಾವಣೆಯಲ್ಲಿ ಮಾಜಿ ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಮುಖಂಡರು ಆಯೋಜಿಸಲಾದ ಉಚಿತ 3 ಆಂಬುಲೆನ್ಸ್ ಸೇವೆ ಮತ್ತು ಕ್ಷೇತ್ರದ ವ್ಯಾಪ್ತಿ 6 ಟ್ರಾಕ್ಟರ್‌ನಲ್ಲಿ ಔಷಧಿ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಲ್ಲಸಂದ್ರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಔಷಧಿಗಳನ್ನು ಪರಿಶೀಲಿಸಿ ಲಸಿಕೆ ಪಡೆಯಲು ಬಂದವರಿಗೆ ಮಾಸ್ಕ್‌ಗಳನ್ನು ವಿತರಿಸಿದರು. ಬಾಗಲಗುಂಟೆ ವ್ಯಾಪ್ತಿಯಲ್ಲಿ ವಾರ್ ರೂಮ್ ಉದ್ಘಾಟಿಸಿ, ಬಿಜೆಪಿ ಮುಖಂಡ ಗುರುಪ್ರಸಾದ್ ನೇತೃತ್ವದಲ್ಲಿ ಕೋವಿಡ್ ರೋಗಿಗಳ ಮನೆಗೆ ಉಚಿತ ಊಟ, ಔಷಧಿ, ಆಕ್ಸಿಜನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಮಾಜಿ ಶಾಸಕ ಎಸ್. ಮುನಿರಾಜು, ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್. ಲೋಕೇಶ್, ಬಿಜೆಪಿ ಮುಖಂಡರಾದ ಶೆಟ್ಟಿಹಳ್ಳಿ ಬಿ. ಸುರೇಶ್, ಸೌಂದರ್ಯ ಭಾರತ್, ಗುರುಪ್ರಸಾದ್ ನಟಗೌಡ, ಮಹಿಮಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT