ಸರಗಳ್ಳರಿಗೆ ನಾಲ್ಕು ವರ್ಷ ಜೈಲು

7

ಸರಗಳ್ಳರಿಗೆ ನಾಲ್ಕು ವರ್ಷ ಜೈಲು

Published:
Updated:
Deccan Herald

ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ನಾಲ್ಕು ವರ್ಷ ಜೈಲು ಮತ್ತು ₹10 ಸಾವಿರ ದಂಡ ವಿಧಿಸಿ ನಗರದ 2ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ನಾಗೇನಹಳ್ಳಿಯ ಫಯಾಜ್‌ ಶರೀಫ್‌ (32), ಕೆ.ಜಿ.ಹಳ್ಳಿಯ ಭಾರತ್ ಮಾತಾ ಲೇಔಟ್‌ನ ಎಂ.ಸಲ್ಮಾನ್‌ ಪಾಷಾ ಶಿಕ್ಷೆಗೆ ಗುರಿಯಾದವರು.

ಸುಧಾ ವಿ.ರಾವ್‌ ಎಂಬುವರು 2012ರ ಮೇ 19ರಂದು ಸಂಜೆ 6.20ರ ವೇಳೆ ಬನಶಂಕರಿ 3ನೇ ಹಂತದಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ₹ 80 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ದೂರು ದಾಖಲಿಸಿದ್ದರು.

ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅದೇ ವರ್ಷ ಸೆಪ್ಟೆಂಬರ್‌ 3ರಂದು ಆರೋಪಿಗಳನ್ನು ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು. ಇನ್‌ಸ್ಪೆಕ್ಟರ್‌ ಸಿ.ಕೆ.ಮಾಲತೇಶ್ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲ
ಯಕ್ಕೆ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !