ಸೋಮವಾರ, ಆಗಸ್ಟ್ 26, 2019
21 °C

ದೇವಸ್ಥಾನದ ಜನಸಂದಣಿಯಲ್ಲೇ ಸರಗಳವು

Published:
Updated:

ಬೆಂಗಳೂರು: ಹಲಸೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಂಟಾಗಿದ್ದ ಜನಸಂದಣಿಯಲ್ಲೇ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳವು ಮಾಡಲಾಗಿದೆ.

ಹಲಸೂರು ಠಾಣೆಗೆ ದೂರು ನೀಡಿರುವ ಸ್ಥಳೀಯ ನಿವಾಸಿ ಸರಸ್ವತಿ, ‘ಯಾರೋ ಕಳ್ಳರು ₹ 48 ಸಾವಿರ ಮೌಲ್ಯದ ಚಿನ್ನದ ಸರವನ್ನು ಕದ್ದಿದ್ದಾರೆ’ ಎಂದು ತಿಳಿಸಿದ್ದಾರೆ.

‘ಜುಲೈ 26ರಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ದೆ. ಜನಸಂದಣಿ ಹೆಚ್ಚಿತ್ತು. ದೇವರ ದರುಶನ ಮಾಡಿಕೊಂಡು ವಾಪಸ್ ಮನೆಗೆ ಹೋಗಿದ್ದೆ. ಕತ್ತಿನಲ್ಲಿ ನೋಡಿಕೊಂಡಾದ ಚಿನ್ನದ ಸರವೇ ಇರಲಿಲ್ಲ’ ಎಂದು ಹೇಳಿದ್ದಾರೆ.

ಪೊಲೀಸರು, ‘ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಅಂಥ ಸಂದಣಿಯಲ್ಲೇ ಕಳ್ಳರು ಕೃತ್ಯ ಎಸಗಿದ್ದು, ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಹೇಳಿದರು. 

Post Comments (+)