ಬೆರಳು ತುಂಡಾದರೂ ಸರ ಕಿತ್ತ!

7

ಬೆರಳು ತುಂಡಾದರೂ ಸರ ಕಿತ್ತ!

Published:
Updated:

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮಿತಿಮೀರಿದ್ದು, ಸರ ಕೀಳುವ ವೇಳೆ ತನ್ನ ಬೆರಳು ತುಂಡಾಗಿದ್ದನ್ನೂ ಲೆಕ್ಕಿಸದೆ ಕಿಡಿಗೇಡಿಯೊಬ್ಬ ಮಹಿಳೆಯ ಚಿನ್ನದ ಸರ ದೋಚಿದ್ದಾನೆ.

ಎಚ್‌ಎಎಲ್ ಸಮೀಪದ ಎಇಸಿಎಸ್ ಲೇಔಟ್‌ ನಿವಾಸಿ ನಾಗೇಶ್ವರಿ ಸರ ಕಳೆದುಕೊಂಡವರು. ಗಣೇಶ ಹಬ್ಬದ ದಿನ (ಸೆ.13) ಬೆಳಿಗ್ಗೆ 10 ಗಂಟೆ ಸುಮಾರಿಗೆ ಅವರು ತಮ್ಮ ಮನೆ ಮುಂದೆ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳಿಬ್ಬರು, ಸ್ವಲ್ಪ ದೂರದಲ್ಲಿ ನಿಂತು ಕೆಲ ಹೊತ್ತು ಅವರ ಚಲನವಲನ ಗಮನಿಸಿದ್ದಾರೆ. ಸ್ಥಳೀಯರ ಓಡಾಟ ಕಡಿಮೆಯಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದಿದ್ದಾರೆ.

ಬೈಕ್ ಇಳಿದು ವಿಳಾಸ ಕೇಳುವವನಂತೆ ಹತ್ತಿರ ಹೋದ ಒಬ್ಬಾತ, ಅವರ ಗಮನ ಬೇರೆಡೆ ಸೆಳೆದು ಸರಕ್ಕೆ ಕೈ ಹಾಕಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡು ನಾಗೇಶ್ವರಿ, ಸರವನ್ನು ಬಿಗಿಯಾಗಿ ಹಿಡಿದುಕೊಂಡು ರಕ್ಷಣೆಗೆ ಕೂಗಿಕೊಂಡಿದ್ದಾರೆ.

ಚೀರಾಟ ಕೇಳಿ ಸ್ಥಳೀಯರು ಹೊರಗೆ ಬರುತ್ತಿದ್ದಂತೆಯೇ ಗಾಬರಿಗೊಂಡ ಆತ, ‌ತಪ್ಪಿಸಿಕೊಳ್ಳುವ ಧಾವಂತದಲ್ಲಿ ಸರವನ್ನು ಬಲವಾಗಿ ಎಳೆದಿದ್ದಾನೆ. ಈ ಹಂತದಲ್ಲಿ ಸರದ ಜತೆಗೆ ಆತನ ಕಿರುಬೆರಳೂ ತುಂಡಾಗಿ ಕೆಳಗೆ ಬಿದ್ದಿದೆ. ತಕ್ಷಣ 56 ಗ್ರಾಂನ ಸರ ತೆಗೆದುಕೊಂಡು, ಸಹಚರನ ಬೈಕ್ ಏರಿ ಹೊರಟು ಹೋಗಿದ್ದಾನೆ. ಈ ಸಂಬಂಧ ನಾಗೇಶ್ವರಿ ಅವರು ಎಚ್‌ಎಎಲ್ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಆ ಕಿರುಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸರಗಳ್ಳರ ಚಹರೆ ಸೆರೆಯಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !