ಬೆಂಗಳೂರು: ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ‘ಎನ್ಎಸ್ಎಸ್ ಸ್ಪೇಸ್ ಸೆಟಲ್ಮೆಂಟ್’ ಸ್ಪರ್ಧೆಯಲ್ಲಿ ಶ್ರೀ ಚೈತನ್ಯ ಸ್ಕೂಲ್ ಸತತ 15ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಈ ಜಾಗತಿಕ ಸ್ಪರ್ಧೆಯಲ್ಲಿ 31 ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, 131 ಪ್ರಾಜೆಕ್ಟ್ಗಳು ಬಹುಮಾನ ಪಡೆದವು. ಅವುಗಳಲ್ಲಿ ಭಾರತದ 80 ಪ್ರಾಜೆಕ್ಟ್ಗಳು ಸೇರಿವೆ. ಶ್ರೀ ಚೈತನ್ಯ ಸ್ಕೂಲ್ನ ವಿದ್ಯಾರ್ಥಿಗಳು 57 ಪ್ರಾಜೆಕ್ಟ್ಗಳಿಗೆ ಬಹುಮಾನ ಪಡೆಯುವ ಮೂಲಕ ಪಾರುಪತ್ಯ ಸಾಧಿಸಿದ್ದಾರೆ. ದೇಶದ ವಿದ್ಯಾರ್ಥಿಗಳು ಜಯಿಸಿದ ಒಟ್ಟು ಬಹುಮಾನಗಳಲ್ಲಿ ಶೇ 71ರಷ್ಟು ಬಹುಮಾನವನ್ನು ಚೈತನ್ಯ ಸ್ಕೂಲ್ ವಿದ್ಯಾರ್ಥಿಗಳೇ ಪಡೆದಿದ್ದಾರೆ ಎಂದು ಶ್ರೀ ಚೈತನ್ಯ ಸಂಸ್ಥೆಯ ನಿರ್ದೇಶಕಿ ಸೀಮಾ ತಿಳಿಸಿದ್ದಾರೆ.

‘ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಮಾತ್ರ ವಿಶ್ವದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದಾರೆ. ವಿಜೇತ ಬಹುಮಾನಗಳಲ್ಲಿ 6 ಪ್ರಾಜೆಕ್ಟ್ಗಳು ಪ್ರಥಮ ಬಹುಮಾನ ಪಡೆದರೆ, 11 ಪ್ರಾಜೆಕ್ಟ್ಗಳು ದ್ವಿತೀಯ ಬಹುಮಾನ, 10 ಪ್ರಾಜೆಕ್ಟ್ಗಳು ತೃತೀಯ ಬಹುಮಾನ ಹಾಗೂ 30 ಪ್ರಾಜೆಕ್ಟ್ಗಳು ಸಮಾಧಾನಕರ ಬಹುಮಾನ ಪಡೆದಿವೆ. ಬಹುಮಾನಿತ 57 ಪ್ರಾಜೆಕ್ಟ್ಗಳಲ್ಲಿ 549 ವಿದ್ಯಾರ್ಥಿಗಳು ಭಾಗವಹಿಸಿದ್ದರು’ ಎಂದು ಹೇಳಿದ್ದಾರೆ.

‘ಭಾರತ ಹೊರತುಪಡಿಸಿ ಉಳಿದ 30 ದೇಶಗಳ ವಿದ್ಯಾರ್ಥಿಗಳು 54 ಪ್ರಾಜೆಕ್ಟ್ಗಳಲ್ಲಿ ಬಹುಮಾನ ಗಳಿಸಿದರೆ, ಶ್ರೀ ಚೈತನ್ಯ ಸ್ಕೂಲ್ನ ವಿದ್ಯಾರ್ಥಿಗಳು ಅದಕ್ಕಿಂತ ಹೆಚ್ಚಿನ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.