ಬೆಂಗಳೂರು: ‘ರಾಜ್ಯ ಸರ್ಕಾರದಿಂದಲೇ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವವನ್ನು ಆಯೋಜಿಸಬೇಕು’ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಸಲಹೆ ನೀಡಿದರು.

ಭಾರತ ಯಾತ್ರಾ ಕೇಂದ್ರವು ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಜನ್ಮಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯ ಸಚಿವ ಸಂಪುಟದ ಬಹುತೇಕ ಸಚಿವರು ಸಮಾಜವಾದದ ಹಿನ್ನೆಲೆಯಿಂದ ಬಂದವರು. ಅವರೆಲ್ಲರಿಗೂ ಚಂದ್ರಶೇಖರ್ ಹಾಗೂ ಹೆಗಡೆ ಅವರೊಂದಿಗೆ ಒಡನಾಟ ಇತ್ತು. ಇದರಿಂದ ರಾಜ್ಯ ಸರ್ಕಾರವೇ ಇಬ್ಬರ ಶತಮಾನೋತ್ಸವ ಆಚರಿಸಬೇಕು. ಕೇಂದ್ರ ಸರ್ಕಾರ ಇದನ್ನು ಮಾಡುವುದಿಲ್ಲ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ರಾಮಕೃಷ್ಣಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದರ ಹಿಂದೆ ಚಂದ್ರಶೇಖರ ಅವರ ಪ್ರಭಾವವಿತ್ತು. ಆ ಕಾಲಕ್ಕೆ ಕಾಂಗ್ರೆಸ್ನಲ್ಲಿಯೇ ಪ್ರಬಲ ನಾಯಕರಾಗಿ ಬೆಳೆದು ಆನಂತರ ಜನತಾಪಕ್ಷವನ್ನು ಕಟ್ಟಿ ಬೆಳೆಸಿದರು ಚಂದ್ರಶೇಖರ್. ಅವರು ಮೊರಾರ್ಜಿ ದೇಸಾಯಿ ಅಧಿಕಾರದಿಂದ ಕೆಳಕ್ಕೆ ಇಳಿದಾಗಲೇ ಪ್ರಧಾನಮಂತ್ರಿ ಆಗಬಹುದಿತ್ತು. ಎಂದೂ ಅಧಿಕಾರಕ್ಕೆ ಆಸೆ ಪಡಲಿಲ್ಲ’ ಎಂದು ತಿಳಿಸಿದರು.

‘ಈಗಂತೂ ಯಾವುದೇ ಒಂದು ವಿಚಾರವನ್ನು ಟೀಕಿಸುವ ಸಂಪ್ರದಾಯ ಬೆಳೆದಿದೆ. ಆರ್ಎಸ್ಎಸ್ ಅನ್ನು ಟೀಕೆ ಮಾಡುವವರೂ ಇನ್ನೊಂದು ಮೂಲಭೂತವಾದವನ್ನೂ ಟೀಕಿಸಬೇಕಲ್ಲವೇ. ಮೋದಿ ವಿರುದ್ದ ಮಾತನಾಡಿದರೆ ಟೀಕೆ ಎದುರಿಸುವೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರಿಸಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ‘ಪ್ರಾಮಾಣಿಕತೆಗೆ ಹೆಸರಾಗಿದ್ದ ಚಂದ್ರಶೇಖರ್ ಅವರು ಆಸ್ತಿ ಪಾಸ್ತಿ ಮಾಡಿಕೊಂಡಿದ್ದರೆ ರಾಜಕಾರಣದಲ್ಲಿ ಎಲ್ಲೋ ಇರುತ್ತಿದ್ದರು. ಅದನ್ನು ಎಂದಿಗೂ ಮಾಡಲಿಲ್ಲ. ಈ ಕಾರಣದಿಂದಲೇ ಅವರು ಜನರ ಕಣ್ಣಲ್ಲಿ ಆದರ್ಶವಾಗಿ ಉಳಿದಿದ್ದಾರೆ’ ಎಂದು ಹೇಳಿದರು.

ಭಾರತ್ ಯಾತ್ರಾ ಕೇಂದ್ರದ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ಕಳೆದ ವರ್ಷದ ಆಗಸ್ಟ್ನಲ್ಲಿ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವ ಆರಂಭಿಸಿದ್ದೇವೆ. ಬರುವ ಆಗಸ್ಟ್ನಲ್ಲಿ ಹೆಗಡೆ ಹಾಗೂ ಚಂದ್ರಶೇಖರ್ ಅವರ ಹೆಸರಲ್ಲಿ ಕಾರ್ಯಕ್ರಮ ಮಾಡುತ್ತೇವೆ’ ಎಂದರು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಭಾರತ್ ಯಾತ್ರಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ವಿ.ನಾಗರಾಜಮೂರ್ತಿ, ಸಂಚಾಲಕ ಕೆ.ಎಸ್.ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.