ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆರವಿನಿಂದ ಪ್ರತಿಭೆಗಳು ಬೆಳಕಿಗೆ’

Last Updated 4 ಮಾರ್ಚ್ 2020, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದು ನಾವು ಮಾಡುವ ದಾನ ಅಥವಾ ನೆರವು ಮುಂದೊಂದು ದಿನ ಆ ವ್ಯಕ್ತಿಗೆ ದಾರಿದೀಪ‍ವಾಗುತ್ತದೆ. ಇದರಿಂದ ಅವರಲ್ಲಿರುವ ಪ್ರತಿಭೆ ಹೊರಬಂದು ದೇಶಕ್ಕೆ ಕೀರ್ತಿ ತರುವ ವ್ಯಕ್ತಿಯಾಗಬಲ್ಲರು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದರು.

ಎಂ.ಎ.ಟ್ರಸ್ಟ್ ವತಿಯಿಂದಪದ್ಮನಾಭನಗರದಲ್ಲಿ ಆಯೋಜಿಸಿದ್ದ ಬಡವರಿಗೆ ಸೌಲಭ್ಯ ವಿತರಣೆ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಸಂಪಾದಿಸಿದ ಹಣವನ್ನು ಒಂದು ದಿನ ಬಿಟ್ಟು ಹೋಗಲೇಬೇಕು. ದುಡಿದ ಹಣದಲ್ಲಿ ಸ್ವಲ್ಪವಾದರೂನಿರ್ಗತಿಕರಿಗೆ ನೀಡಿದರೆ ಅವರ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಎಂದರು.

ಆನಂದ್ ಗುರೂಜಿ,‘ಸಮಾಜದ ಒಳ್ಳೆಯ ಹಾಗೂ ಕೆಟ್ಟ ಟೀಕೆಗಳಿಗೆಧೃತಿಗೆಡದೆ, ನಿಮ್ಮ ಕೆಲಸದಲ್ಲಿ ಮುಂದುವರಿಯಬೇಕು.ದುಡಿಮೆಯತ್ತ ನಿಮ್ಮ ಚಿತ್ತವಿದ್ದಾಗ ಯಶಸ್ಸು ನಿಮ್ಮದಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT