ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ-2: ಸೆ.7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ- ಶಿವನ್

Last Updated 20 ಆಗಸ್ಟ್ 2019, 9:48 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ-2 ಮಂಗಳವಾರ ಬೆಳಿಗ್ಗೆ ಭೂಕಕ್ಷೆಯಿಂದ ಚಂದ್ರನ ಕಕ್ಷಗೆ ಚಲಿಸಿದೆ. ಸೆ.7ರ‌ಂದು ನಸುಕಿನ 1.55ಕ್ಕೆ ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಹೇಳಿದರು.

ಇದುವರೆಗೆ ಚಂದ್ರಯಾನ ಯೋಜನೆಯಂತೆಯೇ ಸಾಗಿದೆ. ಸೆ.2ರಿಂದ ಬಹಳ ಮಹತ್ವದ ಘಟ್ಟ ಆರಂಭವಾಗುತ್ತದೆ ಎಂದು ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಚಂದ್ರನ ದಕ್ಷಿಣ ಧ್ರುವಕ್ಕೆ ಇದುವರೆಗೆ ಯಾರೂ ತೆರಳಿಲ್ಲ. ಹೀಗಾಗಿ ಚಂದ್ರಯಾನ-2 ಕಂಡುಹಿಡಿಯುವ ಮಾಹಿತಿಯ ಬಗ್ಗೆ ಜಗತ್ತೇ ಕುತೂಹಲದಿಂದ ಕಾಯುತ್ತಿದೆ ಎಂದರು.

21, 28, 30 ಮತ್ತು ಸೆ.1ರಂದು ಉಡಾವಣೆಗಳು ನಡೆಯುತ್ತವೆ. ಆಗ ಚಂದ್ರಯಾನ 18 ಸಾವಿರ ಕಿ.ಮೀ.ನಿಂದ 100 ಕಿ.ಮೀ.ಸಮೀಪಕ್ಕೆ ಬಂದಿರುತ್ತದೆ. ಸೆ.2ರಂದು ಆರ್ಬಿಟರ್‌ನಿಂದ ಲ್ಯಾಂಡರ್ ಪ್ರತ್ಯೇಕಗೊಳ್ಳುತ್ತದೆ. ಬಳಿಕ ನಾಲ್ಕು ದಿನಗಳ ಕಾಲ ಲ್ಯಾಂಡರ್ ನಿಧಾನವಾಗಿ ಚಂದ್ರನ ನೆಲದತ್ತ ಸಾಗುತ್ತದೆ. ಇಳಿಯುವ ಜಾಗವನ್ನು ಅಂದಾಜಿಸುತ್ತದೆ.

ಸೆ.7ರ ನಸುಕಿನ 1.40ಕ್ಕೆ ಲ್ಯಾಂಡರ್ ಚಂದ್ರನ ನೆಲವನ್ನು ಸೇರುತ್ತದೆ. ಇದು 15 ನಿಮಿಷದ ಪ್ರಕ್ರಿಯೆ. ಹೀಗಾಗಿ 1.55ಕ್ಕೆ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇರುತ್ತದೆ. 2 ಗಂಟೆ ಬಳಿಕ ರಾಂಪ್ ತೆರೆದುಕೊಳ್ಳುತ್ತದೆ. 3 ಗಂಟೆ ಬಳಿಕ ಸೋಲಾರ್ ಪ್ಯಾನಲ್ ತೆರೆದುಕೊಳ್ಳುತ್ತದೆ ‌. ಬಳಿಕ ರೋವರ್ ಹೊರಗೆ ಬರುತ್ತದೆ. ಒಟ್ಟಾರೆ ಐದಾರು ಗಂಟೆಯೊಳಗೆ ಎಲ್ಲ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಇಸ್ರೊ ಅಧ್ಯಕ್ಷರು ವಿವರಿಸಿದರು.

ಶುಕ್ಲಪಕ್ಷದ 14 ದಿನಗಳ ಕಾಲ ಲಾಂಡರ್ ಮತ್ತು ರೋವರ್ ಹಲವು ಸಂಶೋಧನೆಗಳನ್ನು ನಡೆಸಲಿವೆ. ರೋವರ್ ಸೆಕೆಂಡ್‌ಗೆ1 ಸೆಂ.ಮೀನಂತೆ ಒಟ್ಟು 500 ಮೀಟರ್‌ನಷ್ಟು ಚಲಿಸಿ ನೀರು, ಖನಿಜ, ಕಂಪನ ಸಹಿತ ಹಲವಾರು ಬಗೆಯ ಸಂಶೋಧನೆ ನಡೆಸಲಿದೆ. ಆರ್ಬಿಟರ್ ಒಂದು ವರ್ಷ ಕಾಲ ಚಂದ್ರನ ಸುತ್ತ ತಿರುಗುತ್ತ ಇರಲಿದೆ ಎಂದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT