ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರಣ್‌ ಸೌಹಾರ್ದ ಬ್ಯಾಂಕ್‌: ₹2.89 ಕೋಟಿ ಲಾಭ

Published 18 ಆಗಸ್ಟ್ 2024, 14:14 IST
Last Updated 18 ಆಗಸ್ಟ್ 2024, 14:14 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿಯ ಚರಣ್ ಸೌಹಾರ್ದ ಕೋ ಆಪರೇಟೆವ್ ಬ್ಯಾಂಕ್ ಈ ಬಾರಿ ₹2.89 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ದ್ವಾರಕನಾಥ್ ತಿಳಿಸಿದರು.

ಬ್ಯಾಂಕ್‌ನ 28 ನೇ ಸರ್ವ ಸದಸ್ಯರ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದ ಅವರು, ಕಳೆದ ವರ್ಷ ಬ್ಯಾಂಕ್ ₹2.85 ಕೋಟಿ ಲಾಭಗಳಿಸಿತ್ತು ಎಂದು ಹೇಳಿದರು.

ಗ್ರಾಹಕರ ಹಿತರಕ್ಷಣೆಗೆ ಒತ್ತು ನೀಡಿರುವ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕ ಸ್ನೇಹಿ ಜೊತೆಗೆ ಆರ್ಥಿಕ ಶಿಸ್ತಿಗೆ ಒತ್ತು ನೀಡಲಾಗುವುದು ಎಂದರು. ಬ್ಯಾಂಕ್‌ ಗ್ರಾಹಕ ಹಾಗೂ ಚಲನಚಿತ್ರ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ (ನಿರ್ಮಾಪಕ ಬೆಂಕೋಶ್ರಿ) ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT