ಶನಿವಾರ, ಡಿಸೆಂಬರ್ 7, 2019
25 °C

ಜಪಾನ್ ಉದ್ಯಮಿಯ ಹಣ, ಲ್ಯಾಪ್‌ಟಾಪ್ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರಿನ ಮುಂದೆ ₹ 10ರ ನೋಟುಗಳನ್ನು ಎಸೆದು ಚಾಲಕನ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, ಆತ ಹಣ ತೆಗೆದುಕೊಳ್ಳಲು ಕೆಳಗಿಳಿಯುತ್ತಿದ್ದಂತೆಯೇ ಲ್ಯಾಪ್‌ಟಾಪ್ ಹಾಗೂ ₹ 37 ಸಾವಿರ ಹಣವಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ.

ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯ ಕೆ.ಎಚ್.ರಸ್ತೆಯಲ್ಲಿ ಆ.31ರಂದು ಕೃತ್ಯ ನಡೆದಿದ್ದು, ಈ ಸಂಬಂಧ ಜಪಾನ್ ದೇಶದ ಉದ್ಯಮಿ ಕನೆಕೊ ಟೊಮಕಾಝು ದೂರು ಕೊಟ್ಟಿದ್ದಾರೆ.

ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ಅವರು, ಶಾಂತಿನಗರದ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಆ.31ರ ಸಂಜೆ 5.30ರ ಸುಮಾರಿಗೆ ತಿಂಡಿ ತಿನ್ನಲು ಹೋಟೆಲ್‌ನ ಕಾರಿನಲ್ಲೇ ಕೆ.ಎಚ್.ರಸ್ತೆಯ ‘ಸಕಾಯಿ ಜಪಾನೀಸ್ ರೆಸ್ಟೋರೆಂಟ್‌’ಗೆ ಬಂದಿದ್ದರು. ತಮ್ಮ ಲ್ಯಾಪ್‌ಟಾಪ್ ಹಾಗೂ ಹಣದ ಬ್ಯಾಗನ್ನು ಕಾರಿನಲ್ಲೇ ಬಿಟ್ಟು ಒಳಹೋಗಿದ್ದರು.

ಈ ವೇಳೆ ಅಲ್ಲಿಗೆ ಬಂದಿರುವ ದುಷ್ಕರ್ಮಿಗಳು, ಚಾಲಕನಿಗೆ ವಂಚಿಸಿ ಬ್ಯಾಗ್ ದೋಚಿದ್ದಾರೆ. ಕೂಡಲೇ ಚಾಲಕ ರೆಸ್ಟೋರೆಂಟ್‌ಗೆ ತೆರಳಿ, ಅವರಿಗೆ ವಿಷಯ ತಿಳಿಸಿದ್ದಾನೆ. ಆಗ ಉದ್ಯಮಿ ಠಾಣೆಯ ಮೆಟ್ಟಿಲೇರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು