ಬುಧವಾರ, ಜನವರಿ 22, 2020
19 °C

ಚೆಕ್‌ ತಿದ್ದಿ ₹ 8.78 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚೆಕ್‌ವೊಂದರ ಮಾಹಿತಿಯನ್ನು ತಿದ್ದುಪಡಿ ಮಾಡಿರುವ ಬಿ.ಆರ್.ರಾಮಪ್ರಸಾದ್ ಎಂಬುವರು ₹ 8.78 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ’ ಎಂದು ಎಸ್‌ಬಿಐ ನಾಗದೇವನಹಳ್ಳಿ ಶಾಖೆ ವ್ಯವಸ್ಥಾಪಕ ನಿತೇಶ್ ಶಾಮ್ ಎಂಬುವರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ.

‘ಕೊರೋನಾ ರೆಮಿಡಿಯಾಸ್ ಕಂಪನಿಯವರು ಬ್ರೂಕ್ಸ್ ಲ್ಯಾಬೋರೆಟರೀಸ್ ಕಂಪನಿ ಹೆಸರಿನಲ್ಲಿ ನ. 17ರಂದು ಚೆಕ್‌ ನೀಡಿದ್ದರು. ಆ ಚೆಕ್‌ನಲ್ಲಿದ್ದ ಹೆಸರನ್ನು ರಾಮಪ್ರಸಾದ್‌ ತಿದ್ದುಪಡಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ನಿತೇಶ್‌ ಒತ್ತಾಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು