ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಠಾಣೆ ಮೆಟ್ಟಿಲೇರಿದ ಸಚಿವಾಲಯ ನೌಕರ

Last Updated 19 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ‘ಜಯಶ್ರೀ ಹೌಸಿಂಗ್ ಕೋ–ಆಪರೇಟಿವ್ ಸೊಸೈಟಿ ಅಡಿ ನಿವೇಶನ ಕೊಡಿಸುವುದಾಗಿ ಹೇಳಿ ₹ 4.20 ಲಕ್ಷ ಪಡೆದು ವಂಚಿಸಲಾಗಿದೆ’ ಎಂದು ಆರೋಪಿಸಿ ವಿಧಾನಸಭೆ ಸಚಿ ವಾಲಯದ ನೌಕರ ಇಸಾಕ್ ಅಹಮ್ಮದ್ ಎಂಬುವರು ಚಂದ್ರಾ ಲೇಔಟ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಜೆ.ಸಿ.ನಗರ ನಿವಾಸಿ ಇಸಾಕ್ ಅವರ ದೂರು ಆಧರಿಸಿ ಆರೋಪಿಗಳಾದ ಅಮರ್ ಸಿಂಗ್, ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ನೇಹಿತರೊಬ್ಬರ ಮೂಲಕ ಇಸಾಕ್ ಅವರಿಗೆ ಅಮರ್ ಸಿಂಗ್ ಪರಿಚಯವಾಗಿತ್ತು. ಜಯಶ್ರೀ ಹೌಸಿಂಗ್ ಕೋ–ಆಪರೇಟಿವ್ ಸೊಸೈಟಿ ಅಧ್ಯಕ್ಷ ನೆಂದು ಹೇಳಿದ್ದ ಅವರು ಸದಸ್ಯರಾದರೆ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದ. ಅದನ್ನು ನಂಬಿದ್ದ ದೂರುದಾರ, 2012ರ ಮೇ 29ರಂದು ₹ 4.20 ಲಕ್ಷ ನೀಡಿದ್ದರು.’

‘ಹಣ ಪಡೆದಿದ್ದ ಆರೋಪಿ, ನಿವೇಶನ ಕೊಡಿಸಿರಲಿಲ್ಲ. ಅನುಮಾನ ಗೊಂಡ ದೂರುದಾರ, ಸೊಸೈಟಿ ಬಗ್ಗೆ ಪರಿಶೀಲಿಸಿದ್ದರು. ಅದು ನಕಲಿ ಸೊಸೈಟಿ ಎಂಬುದು ಗೊತ್ತಾಗಿತ್ತು. ಹಣ ವಾಪಸು ನೀಡಲು ಕೋರಿದರೆ ಜೀವ ಬೆದರಿಕೆಯೊಡ್ಡಿದ್ದಾರೆ ದೂರುದಾರರು ತಿಳಿಸಿದ್ದಾರೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT