ಗುರುವಾರ , ಏಪ್ರಿಲ್ 15, 2021
31 °C

ಚಿಕಿತ್ಸೆ ಸಿಗದೆ ಮಗು ಸಾವು; ಸಿ.ಎಂ ಮನೆ ಎದುರು ತಂದೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹತ್ತು ಆಸ್ಪತ್ರೆಗಳಿಗೆ ಅಲೆದರೂ ಸೂಕ್ತ ಚಿಕಿತ್ಸೆ ಸಿಗದೇ ತಮ್ಮ ಒಂದು ತಿಂಗಳ ಮಗು ಮೃತಪಟ್ಟಿದ್ದರಿಂದ ನೊಂದಿರುವ ತಂದೆ ವೆಂಕಟೇಶ್‌ ನಾಯ್ಡು ಎಂಬುವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಮೃತ ಮಗುವಿನ ಫೋಟೊ ಹಿಡಿದುಕೊಂಡು ಸಿ.ಎಂ. ಅವರ ಧವಳಗಿರಿ ನಿವಾಸದ ಎದುರು ನಿಂತಿದ್ದ ವೆಂಕಟೇಶ್, ‘ನನ್ನ ಮಗುವಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಮಗುವಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತಾಗಬೇಕು’ ಎಂದು ಒತ್ತಾಯಿಸಿದರು.

‘ನನ್ನ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮತ್ತಷ್ಟು ಜೀವಗಳು ಬಲಿಯಾಗುತ್ತವೆ’ ಎಂದು ಹೇಳಿದರು.

ಬಳಿಕ ಗೃಹ ಕಚೇರಿ ’ಕೃಷ್ಣಾ‘ ಬಳಿ ಬಂದ ವೆಂಕಟೇಶ್ ಅಲ್ಲೂ ಪ್ರತಿಭಟನೆ ಮುಂದುವರಿಸಿದರು. ಸ್ಥಳದಲ್ಲಿದ್ದ ಪೊಲೀಸರು, ವೆಂಕಟೇಶ್‌ ಅವರನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಸ್ಥಳದಿಂದ ಕರೆದೊಯ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು