ಬೆಂಗಳೂರು: ನಾಯಂಡಹಳ್ಳಿಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಸಹನಾ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದು, ಗಾಯಗೊಂಡಿದೆ.

ಘಟನೆ ಏಪ್ರಿಲ್ 6ರಂದು ನಡೆದಿದೆ. ನಾಯಂಡಹಳ್ಳಿಯ ನವೀನ್ ಮತ್ತು ಜಯಶ್ರೀ ದಂಪತಿ ಪುತ್ರಿ ಸಹನಾ ಮಹಡಿಯಿಂದ ಮಗು ಕೆಳಕ್ಕೆ ಬೀಳುತ್ತಿರುವ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿಗೆ ಬಸವನಗುಡಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ತಲೆಯ ಭಾಗಕ್ಕೆ ಗಾಯವಾಗಿದೆ. ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ’ ಎಂದು ನವೀನ್ ತಿಳಿಸಿದ್ದಾರೆ.

ತಾಯಿ ಜಯಶ್ರೀ ಅವರು ಹಾಲು ಕುದಿಸಲು ಇಟ್ಟಿದ್ದರು. ಅದನ್ನು ನೋಡಲು ಅಡುಗೆ ಮನೆಗೆ ತೆರಳಿದ್ದರು. ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಗಾಯಗೊಂಡಿತ್ತು. ಹೊರಕ್ಕೆ ಬಂದು ಮಗು ಬಿದ್ದಿರುವುದನ್ನು ನೋಡಿದ್ದ ತಾಯಿಯೂ ಅಸ್ವಸ್ಥಗೊಂಡಿದ್ದರು.

ಶಾಸಕ ಪ್ರಿಯಕೃಷ್ಣ ಅವರ ಪರವಾಗಿ ಪ್ರದೀಪ್ ಕೃಷ್ಣಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಚಿಕಿತ್ಸೆಗೆ ₹2 ಲಕ್ಷ ನೆರವು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.