ಬೆಂಗಳೂರು: ಸಹಪಾಠಿಗಳನ್ನು ಹಾವಿನಿಂದ ರಕ್ಷಿಸಿದ ಬಾಲಕ, ಬಾವಿಯಲ್ಲಿ ಬಿದ್ದ ಹಸು–ಕರು ಮತ್ತು ವ್ಯಕ್ತಿಯ ಪ್ರಾಣ ಉಳಿಸಿದ ಬಾಲ ಸಾಹಸಿಗರು, ಆಟೊರಿಕ್ಷಾ ಅಡಿಯಲ್ಲಿ ಸಿಲುಕಿದ ತಾಯಿಯನ್ನು ರಕ್ಷಿಸಿದ ಬಾಲಕಿ, ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ತಾಯಿ ಮತ್ತು ಮಕ್ಕಳಿಬ್ಬರ ಜೀವ ಕಾಪಾಡಿದ ಉಳಿಸಿದ ಸಾಹಸಗಾರ್ತಿ...

ಹೀಗೆ ಧೈರ್ಯ, ಸಾಹಸ ಹಾಗೂ ಸಮಯ ಪ್ರಜ್ಞೆಯಿಂದ ಜೀವ ಕಾಪಾಡಿದ ಮಕ್ಕಳಿಗೆ ಶುಕ್ರವಾರ ನಡೆದ ಮಕ್ಕಳ ದಿನಾಚರಣೆಯಲ್ಲಿ ರಾಜ್ಯಮಟ್ಟದ ‘ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಳು ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.

ಶಾಲಾ ಕೊಠಡಿಯಲ್ಲಿ ಕುಳಿತಿರುವಾಗ ಸಹಪಾಠಿಯ ಬ್ಯಾಗ್ಗೆ ನುಸುಳಿದ್ದ ಹಾವನ್ನು ಗಮನಿಸಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆನೆಕೆರೆ ಬಾಳೂರು ಗ್ರಾಮದ ಎರಡನೇ ತರಗತಿ ವಿದ್ಯಾರ್ಥಿ ಮಣಿಕಂಠ, ಆ ಬ್ಯಾಗ್ನ ಜಿಪ್ ಅನ್ನು ಹಾಕಿ ಶಾಲಾ ಮೈದಾನದಲ್ಲಿ ತಂದಿಡುವ ಮೂಲಕ ಸಹಪಾಠಿಗಳ ಜೀವ ಉಳಿಸಿದ್ದ.

55 ಅಡಿ ತೆರೆದ ಬಾವಿಯಲ್ಲಿ ಬಿದ್ದ ಹಸು–ಕರುವಿನ ಪ್ರಾಣ ರಕ್ಷಿಸಲು ಮನೆಯ ಯಜಮಾನ ಬಾವಿಗೆ ಧುಮುಕಿದ್ದ. ಆದರೆ, ಬಾವಿಗೆ ಕಟ್ಟಿದ ಹಗ್ಗ ತುಂಡಾಗಿ, ಹಸು–ಕರು ಮತ್ತು ಅದರ ಯಜಮಾನ ಮೇಲೆ ಬರಲು ಸಾಧ್ಯವಾಗದೇ ಸಹಾಯಕ್ಕಾಗಿ ಕೂಗಿಕೊಂಡಿದ್ದ. ಇದನ್ನು ಕೇಳಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆರೋಡಿ ಗ್ರಾಮದ ಚಿಣ್ಣರಾದ ನಿಶಾಂತ್–ಅಶ್ವಿನ್ ಆ ವ್ಯಕ್ತಿಗೆ ಹಗ್ಗವನ್ನು ನೀಡುವ ಮೂಲಕ ಪ್ರಾಣ ಕಾಪಾಡಿದ್ದರು. ಗ್ರಾಮಸ್ಥರನ್ನು ಸೇರಿಸಿ ಕರು ಮತ್ತು ಹಸುವಿನ ಜೀವ ರಕ್ಷಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆದ ಅಪಘಾತದಲ್ಲಿ ಆಟೊರಿಕ್ಷಾದ ಅಡಿಯಲ್ಲಿ ತನ್ನ ತಾಯಿ ಸಿಲುಕಿದ್ದರು. ಆಟೊ ರಿಕ್ಷಾವನ್ನು ಮೇಲೆತ್ತಿದ ವೈಭವಿ ಅಮ್ಮನ ಪ್ರಾಣ ಉಳಿಸಿದ್ದಳು. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ 16 ಅಡಿ ಉದ್ದದ 65 ಕೆ.ಜಿ ತೂಕದ ಹೆಬ್ಬಾವನ್ನು ಹಿಡಿದ ಬಿ. ಧೀರಜ್ ಐತಾಳ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಿದ್ದ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಹನಮಾಪುರ ಗ್ರಾಮದ 5ನೇ ತರಗತಿ ಓದುತ್ತಿರುವ ಬಾಲಕ ಮಹಮ್ಮದ ಸಮೀರ ಹಾಗೂ ಆತನ ಅಜ್ಜನೊಂದಿಗೆ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಬಾಲಕನ ಅಜ್ಜನಿಗೆ ವಿದ್ಯುತ್ ತಂತಿ ತಗುಲಿತ್ತು. ಸಮೀರ ಗಾಬರಿಯಾಗದೇ ತನ್ನಲ್ಲಿದ್ದ ಕೊಡೆಯ ಹಿಡಿಕೆಯಿಂದ ವಿದ್ಯುತ್ ತಂತಿ ದೂರ ಸರಿಸಿ, ಅಜ್ಜನ ಜೀವ ಕಾಪಾಡಿದ್ದ. ಬೆಳಗಾವಿಯ 9ನೇ ತರಗತಿಯ ವಿದ್ಯಾರ್ಥಿನಿ ಸ್ಫೂರ್ತಿ ತನ್ನ ತಂದೆ–ತಾಯಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಬೆಳಗಾವಿ ಜಿಲ್ಲೆಯ ತಿಲಕವಾಡಿ ರೈಲ್ವೆ ಗೇಟ್ ಬಳಿ ತಾಯಿ ಮತ್ತು ಮಕ್ಕಳಿಬ್ಬರು ಆತ್ಮಹತ್ಯೆ ಪ್ರಯತ್ನಿಸುತ್ತಿದ್ದರು. ಇದನ್ನು ಗಮನಿಸಿದ್ದ ಸ್ಪೂರ್ತಿ ಪ್ರಾಣದ ಹಂಗು ತೊರೆದು ಅವರನ್ನು ರಕ್ಷಿಸಿದ್ದಳು.

ಸಾಹಸ ತೋರಿದ ಚಿಣ್ಣರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು, ತಲಾ ₹10 ಸಾವಿರ ನಗದು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನೂ ವಿತರಿಸಿದರು.

ರಾಜ್ಯದಲ್ಲಿ ಮಕ್ಕಳ ಆರೋಗ್ಯ ಶಿಕ್ಷಣ ಸುರಕ್ಷತೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುವುದು
ಲಕ್ಷ್ಮೀ ಹೆಬ್ಬಾಳ್ಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ನಾಲ್ಕು ಸಂಸ್ಥೆ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವಾಣಿಗೆರೆ ಗ್ರಾಮದ ಸಂತ ಗ್ರೆಗೋರಿಯಸ್ ದಯಾ ಭವನ ಧಾರವಾಡದ ಶಾರದಾ ಕಾಲೊನಿಯಲ್ಲಿರುವ ಹೊಂಬೆಳಕು ಪ್ರತಿಷ್ಠಾನ ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳಿ ಹಾಗೂ ಕೋಲಾರದ ಜಯನಗರದ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘಗಳಿಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ತಲಾ ₹1 ಲಕ್ಷ ನಗದು ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಿವಮೊಗ್ಗದ ಆಲ್ಕೊಳದ ನಂದಿನಿ ಬಡಾವಣೆಯ ಎಚ್.ಪಿ. ಸುದರ್ಶನ್ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕು ಹಳಿಯಾಳದ ಸುನೀಲ ಮ. ಕಮ್ಮಾರ್ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ್ನ ಸಂಗಮೇಶ್ ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರಿನ ಗ್ರಾಮದ ಗವಿಸಿದ್ದಯ್ಯ ಜ. ಹಳ್ಳಿಕೇರಿಮಠ ಅವರು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆಗೈದಿದ್ದು ಇವರಿಗೆ ತಲಾ ₹25 ಸಾವಿರ ನಗದು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.