ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಆಸಕ್ತಿದಾಯಕ ಸಾಹಿತ್ಯ ರಚಿಸಿ ಆ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್ ಹೇಳಿದರು.

ಚಿತ್ರಕಲಾ ಪರಿಷತ್ನಲ್ಲಿ ಅಭಿರುಚಿ ಪ್ರಕಾಶನ, ಕಾಡುಮಲ್ಲೇಶ್ವರ ಗೆಳಯರ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಜಿಪಿ ಚಂದ್ರಶೇಖರ್ ಅವರ ಆತ್ಮಕಥೆ ‘ರೀಸನ್ ಪಾಯಿನ್ಸ್ ಫ್ಯಾಷನ್’ ಪುಸ್ತಕ ಜನಾರ್ಪಣೆ ಮಾಡಿ ಮಾತನಾಡಿದರು.

‘ಅಧಿಕಾರಿಗಳು ಸಾಹಿತ್ಯ ರಚಿಸಿದ ಸಾಲಿಗೆ ಸಿ.ಚಂದ್ರಶೇಖರ್ ಸೇರ್ಪಡೆಯಾಗಿದ್ದಾರೆ. ಅವರ ಈ ಕೃತಿ ಆಸಕ್ತಿದಾಯಕವಾಗಿದ್ದು, ಇವರ ಬರವಣಿಗೆಯಲ್ಲಿ ಸಾಹಿತ್ಯದ ಅಂಶ ಗಟ್ಟಿಯಾಗಿದೆ ಎಂದರು.

ಲೇಖಕ ಸಿ.ಚಂದ್ರಶೇಖರ್ ಮಾತನಾಡಿ, ‘ಇದು ನನ್ನ ಜೀವನದ ಕಥೆ ಆನ್ನುವ ಬದಲು ನಾನು ನೋಡಿದ ವ್ಯಕ್ತಿಗಳು, ನೈಜ ಘಟನೆಗಳು, ರೈತ ಹೋರಾಟವನ್ನು ಒಳಗೊಂಡಿದೆ. ಇದು ನನ್ನ ನಾಲ್ಕನೇ ಪುಸ್ತಕವಾಗಿದೆ. 1974ರಲ್ಲಿ ಭೂ ಕಾಯ್ದೆ ಬಂದಾಗ ರೈತರ ಬೇಡಿಕೆಗಳಿಗೆ ಸರ್ಕಾರ ಹೇಗೆ ಸ್ಪಂದಿಸಿತು. ಪೊಲೀಸ್ ಅಧಿಕಾರಿಯಾಗಿ ಯಾವ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಿದೆ ಎನ್ನುವ ವಿವರಗಳು ಇದರಲ್ಲಿವೆ’ ಎಂದರು.

‘ರೈತ ಹೋರಾಟಗಾರರಾದ ಎಂ.ಡಿ.ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಸುಂದರೇಶ್, ಕಡಿದಾಳು ಶಾಮಣ್ಣ ಅವರೊಂದಿಗಿನ ಒಡನಾಟದಿಂದ ರೈತ ಚಳವಳಿ, ರೈತರ ಸಮಸ್ಯೆಗಳು ಅರ್ಥವಾಯಿತು. ಎಲ್ಲ ರೈತರ ಸಮಸ್ಯೆ ಒಂದೇ ಆಗಿರುವುದಿಲ್ಲ. ಸಾಧನೆ ಮಾಡಿದ ವ್ಯಕ್ತಿಗಳ ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಮಾತನಾಡಿ, ಸಿ.ಚಂದ್ರಶೇಖರ್ ಅವರು ಪೊಲೀಸ್ ಇಲಾಖೆಯ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದಾರೆ. ಕಾಡು ಮಲ್ಲೇಶ್ವರ ಗೆಳಯರ ಬಳಗ ಕಲೆ, ಸಾಹಿತ್ಯ, ಜನಪದ, ಸಂಗೀತಕ್ಕೆ ಪ್ರೋತ್ಸಾಹ ಮತ್ತು ಕಲಾವಿದರಿಗೆ ಸಹಕಾರ ನೀಡುತ್ತಾ ಬಂದಿದೆ. ಇದನ್ನು ನಿರಂತರವಾಗಿ ಮುಂದುವರಿಸುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.