ಬೆಂಗಳೂರು: ಕ್ರೈಸ್ಟ್ ವಿಶ್ವವಿದ್ಯಾಲಯದ ಕನ್ನಡ ಸಂಘವು ತನ್ನ ಸುವರ್ಣ ಮಹೋತ್ಸವ ಸಮಾರೋಪವನ್ನು ಅದ್ದೂರಿಯಾಗಿ ಆಚರಿಸಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹಾಗೂ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು.

ಸಂಘದ ಐದು ದಶಕಗಳ ಪಯಣಕ್ಕೆ ಮಹತ್ವದ ಕೊಡುಗೆ ನೀಡಿದ ಲೇಖಕರು, ವಿಮರ್ಶಕರು, ಅನುವಾದಕರು ಮತ್ತು ಪಂಡಿತರನ್ನು ಗೌರವಿಸಲಾಯಿತು. ಕುಲಪತಿ ಡಾ.ಜೋಸೆಫ್ ಸಿ.ಸಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

1971ರಲ್ಲಿ ಸ್ಥಾಪಿತವಾದ ಈ ಸಂಘವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಇದುವರೆಗೆ 246 ಪುಸ್ತಕಗಳನ್ನು ಪ್ರಕಟಿಸಿದೆ. ಅಂತರಕಾಲೇಜು ಸ್ಪರ್ಧೆಗಳು ಮತ್ತು ಸಾಹಿತ್ಯ ಚಟುವಟಿಕೆಗಳ ಮೂಲಕ 700ಕ್ಕೂ ಹೆಚ್ಚು ಯುವ ಲೇಖಕರನ್ನು ಬೆಳೆಸಿದೆ. 30ಕ್ಕೂ ಅಧಿಕ ಪ್ರಕಟಣೆಗಳು ರಾಜ್ಯ ಮತ್ತು ರಾಷ್ಟ್ರೀಯ ಸಾಹಿತ್ಯ ಸಂಸ್ಥೆಗಳ ಮಾನ್ಯತೆ ಪಡೆದಿವೆ. ವರ್ಷಪೂರ್ತಿ ನಡೆಯುವ ಸಾಹಿತ್ಯ ಚಟುವಟಿಕೆಗಳೇ ಸಂಘದ ವೈಶಿಷ್ಟ್ಯವೆಂದು ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಪುರುಷೋತ್ತಮ ಬಿಳಿಮಲೆ ಅವರು, ‘ಅನೇಕ ಸಂಘಗಳು ನಿಷ್ಕ್ರಿಯವಾಗುತ್ತಿರುವ ಸಂದರ್ಭದಲ್ಲಿ ಕ್ರೈಸ್ಟ್ ಕನ್ನಡ ಸಂಘ ತನ್ನ ನಿರಂತರತೆ ಮತ್ತು ಸಾರ್ವಜನಿಕ ಪ್ರಾಸಂಗಿಕತೆಯನ್ನು ಉಳಿಸಿಕೊಂಡಿದೆ’ ಎಂದು ಹೇಳಿದರು.

ಗೌರವ ಸ್ವೀಕರಿಸಿದವರ ಪರವಾಗಿ ಮಾತನಾಡಿದ ಎಚ್.ಎಸ್. ರಾಘವೇಂದ್ರರಾವ್, ತರಗತಿಯನ್ನು ಮೀರಿದ ಸಾರ್ವಜನಿಕ ಸಾಹಿತ್ಯ ಚಳವಳಿಯನ್ನು ಸಂಘ ರೂಪಿಸಿದೆ ಎಂದು ವರ್ಣಿಸಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೇಂದ್ರೆ ಹಾಗೂ ಜಿ.ಪಿ. ರಾಜರತ್ನಂ ಅವರಂತಹ ಮಹನೀಯರ ಪ್ರಭಾವವನ್ನು ಸ್ಮರಿಸಿದರು.

ಜೋಸೆಫ್ ಸಿ.ಸಿ., 5,000ಕ್ಕೂ ಹೆಚ್ಚು ಲೇಖನಗಳನ್ನು ಕನ್ನಡ ವಿಕಿಪೀಡಿಯಗೆ ನೀಡುವುದು, ಪ್ರಕಟಣೆಗಳನ್ನು ಇ-ಪುಸ್ತಕಗಳಾಗಿ ಪರಿವರ್ತಿಸುವುದು ಸೇರಿದಂತೆ ಡಿಜಿಟಲ್ ಉಪಕ್ರಮಗಳನ್ನು ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.