₹2 ಕೋಟಿ ಮೌಲ್ಯದ ವಿದೇಶಿ ಸಿಗರೇಟ್‌ ವಶ

ಬುಧವಾರ, ಜೂಲೈ 24, 2019
27 °C
ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆ

₹2 ಕೋಟಿ ಮೌಲ್ಯದ ವಿದೇಶಿ ಸಿಗರೇಟ್‌ ವಶ

Published:
Updated:

ಬೆಂಗಳೂರು: ಕಸ್ಟಮ್ಸ್‌ ಅಧಿಕಾರಿಗಳು ಮೂರು ಗೋದಾಮುಗಳ ಮೇಲೆ ದಾಳಿ ಮಾಡಿ ಎಚ್ಚರಿಕೆ ಸಂದೇಶ ಇಲ್ಲದ, ಹೊರ ದೇಶಗಳಿಂದ ಅಕ್ರಮವಾಗಿ ಸಾಗಣೆ ಮಾಡಿರುವ ₹ 2 ಕೋಟಿ ಮೌಲ್ಯದ 10 ಲಕ್ಷ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಟಿ ಮಾರುಕಟ್ಟೆ ಬಳಿಯ ಗೋದಾಮುಗಳಲ್ಲಿ ವಿದೇಶಿ ಸಿಗರೇಟುಗಳನ್ನು ಇಡಲಾಗಿತ್ತು. ಮರ್ಲ್‌ಬರೊ ಗೋಲ್ಡ್‌, ಮಾಂಡ್‌, ಎಸ್ಸೆ ಗೋಲ್ಡ್, ಮ್ಯಾಂಚಿಸ್ಟರ್‌ ಲೈಟ್‌ ಸಿಗರೇಟ್‌ಗಳ ಸಹಿತ ವಿವಿಧ ಬ್ರ್ಯಾಂಡ್‌ ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಸಿಗರೇಟ್‌ ಹಾಗೂ ತಂಬಾಕು ಪದಾರ್ಥಗಳ ತಿದ್ದುಪಡಿ ನಿಯಮ 2017’ರ ಅಡಿ ಸಿಗರೇಟ್‌ ಪ್ಯಾಕ್‌ಗಳ ಮೇಲೆ ಎಚ್ಚರಿಕೆ ಸಂದೇಶ ಹಾಕದೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಸಿಗರೇಟ್‌ಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ. ಈ ಸಿಗರೇಟ್‌ಗಳನ್ನು ಬಾರ್‌, ಪಬ್‌ ಮತ್ತಿತರ ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಂಬಂಧ ತನಿಖೆ ನಡೆಯು
ತ್ತಿದೆ ಎಂದು ಮೂಲಗಳು ತಿಳಿಸಿವೆ ಕೇವಲ ಒಂದು ತಿಂಗಳಲ್ಲಿ ವಿದೇಶಿ ತಯಾರಿಕೆ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿರುವ ಎರಡನೇ ಪ್ರಕರಣ ಇದು. ಜೂನ್‌ ಎರಡನೇ ವಾರದಲ್ಲಿ ಮೊದಲ ಬಾರಿಗೆ ಅಕ್ರಮ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !