ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಟ್ಯಾಕ್ಸಿ ಪ್ರಯಾಣ ದುಬಾರಿ: ಕನಿಷ್ಠ ದರ ₹ 75

Last Updated 2 ಫೆಬ್ರುವರಿ 2021, 6:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಎಲ್ಲ ನಗರ ಪ್ರದೇಶಗಳಿಗೂ ಅನ್ವಯವಾಗುವಂತೆ ಸಿಟಿ ಟ್ಯಾಕ್ಸಿ ಬಾಡಿಗೆ ದರವನ್ನು ಪರಿಷ್ಕರಿಸಿ ಸಾರಿಗೆ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದ ಟ್ಯಾಕ್ಸಿಗಳಿಗೆ 4 ಕಿ.ಮೀ.ವರೆಗೆ ಕನಿಷ್ಠ ಪ್ರಯಾಣ ದರವನ್ನು ₹ 75ಕ್ಕೆ ಹೆಚ್ಚಿಸಿದ್ದು, ನಂತರದ ಪ್ರತಿ ಕಿ.ಮೀ. ₹ 18 ನಿಗದಿಪಡಿಸಲಾಗಿದೆ. ಹವಾ ನಿಯಂತ್ರಿತ ಟ್ಯಾಕ್ಸಿಗಳಿಗೆ 4 ಕಿ.ಮೀ.ವರೆಗೆ ಕನಿಷ್ಠ ಪ್ರಯಾಣ ದರವನ್ನು ₹ 100ಕ್ಕೆ ಹೆಚ್ಚಿಸಲಾಗಿದೆ. ನಂತರದ ಪ್ರತಿ ಕಿ.ಮೀ.ಗೆ ₹ 24 ಬಾಡಿಗೆ ದರ ನಿಗದಿ ಮಾಡಲಾಗಿದೆ.

ಮೊದಲ 5 ನಿಮಿಷಗಳವರೆಗೆ ಕಾಯುವಿಕೆ ಉಚಿತವಾಗಿದ್ದು, ನಂತರ ಪ್ರತಿ ನಿಮಿಷಕ್ಕೆ ₹ 1 ದರ ನೀಡಬೇಕು. 120 ಕೆ.ಜಿವರೆಗಿನ ಲಗೇಜು ಸಾಗಣೆಗೆ ಶುಲ್ಕವಿಲ್ಲ. ನಂತರದ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹ 7 ದರ ನಿಗದಿಪಡಿಸಲಾಗಿದೆ. ರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ ಸಂಚರಿಸುವ ಟ್ಯಾಕ್ಸಿಗಳ ಪ್ರಯಾಣ ದರದ ಮೇಲೆ ಶೇಕಡ 10ರಷ್ಟು ಹೆಚ್ಚುವರಿ ದರವನ್ನು ನಿಗದಿ ಮಾಡಲಾಗಿದೆ.

2013ರಲ್ಲಿ ರಾಜ್ಯದಾದ್ಯಂತ ಅನ್ವಯವಾಗುವಂತೆ ಸಿಟಿ ಟ್ಯಾಕ್ಸಿ ಪ್ರಯಾಣ ದರ ಪರಿಷ್ಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT