ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸಿಬ್ಬಂದಿ ಯಾಕೆ?

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬ್ಯಾಂಕ್ ಶಾಖೆಗೆ ಹೋಗಿದ್ದೆ. ‘7ನೇ ತಾರೀಕಿನಿಂದ 11ನೇ ತಾರೀಕಿನವರೆಗೆ ಸಿಬ್ಬಂದಿ ಚುನಾವಣಾ ಕರ್ತವ್ಯದ ಮೇಲಿರುವುದರಿಂದ ನಿಮ್ಮ ವ್ಯವಹಾರವನ್ನು ಮೊದಲೇ ಮಾಡಿಕೊಳ್ಳಿ’ ಎಂಬ ಸೂಚನಾ ಫಲಕವನ್ನು ಅಲ್ಲಿ ಪ್ರದರ್ಶಿಸಿದ್ದರು.

‌ಅಲ್ಲೇನೋ ನಗದು ಬೇಗ ಸಿಕ್ಕಿತು. ಕೆಂಪೇಗೌಡ ರಸ್ತೆಯಲ್ಲಿರುವ ಇನ್ನೊಂದು ಶಾಖೆಯಲ್ಲಿ ಸ್ಥಿತಿ ಬೇರೆ ಇತ್ತು. ಪಾವತಿ ಕೌಂಟರ್ ಮುಂದೆ ಉದ್ದನೆಯ ಸಾಲು. ಸ್ವಲ್ಪವೇ ಹಣ ಪಡೆಯಲು ಸಹ 20 ನಿಮಿಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು.

ತಂತ್ರಜ್ಞಾನ ಇಷ್ಟೆಲ್ಲ ಅಭಿವೃದ್ಧಿಯಾಗಿದೆ. ಆದರೂಬ್ಯಾಂಕ್ ಸಿಬ್ಬಂದಿಯನ್ನೂ ಚುನಾವಣಾ ಕೆಲಸಕ್ಕೆ ಹಾಕಿಕೊಳ್ಳಬೇಕೆ? ಮತದಾರನಾದ ನನಗೆ ವೋಟು
ಹಾಕಲು ಇನ್ನೂ ಬಲವಾದ ಕಾರಣ ಸಿಕ್ಕಿಲ್ಲ! ಹೀಗಿರುವಾಗ ಬೆಟ್ಟ ಅಗೆದು ಇಲಿ ಸಿಕ್ಕರೆ? Tweedledum And Tweedledee ನೆನಪಿಗೆ ಬಂತು.

-ಎಚ್.ಎಸ್. ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT