ಭಾನುವಾರ, ಜುಲೈ 25, 2021
21 °C

ಕೋವಿಡ್: ಸೋಂಕಿನ ತೀವ್ರತೆ ತಡೆಗೆ ಔಷಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪೆಕ್ಸ್ ಲ್ಯಾಬೊರೇಟರಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ರೋಗನಿರೋಧಕ ಶಕ್ತಿ ವೃದ್ಧಿಸುವ ‘ಕ್ಲೆವಿರಾ’ ಆಯುರ್ವೇದ ಔಷಧವನ್ನು ಸಂಶೋಧಿಸಿದ್ದು, ಇದು ಕೋವಿಡ್ ಕಾಯಿಲೆಯ ತೀವ್ರತೆ ತಡೆಯಲು ಸಹಕಾರಿ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.

ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಈ ಔಷಧವನ್ನು ಬಿಡುಗಡೆ ಮಾಡಲಾಯಿತು. ಇದು ಮಾತ್ರೆ ಮತ್ತು ಸಿರಪ್ ರೂಪದಲ್ಲಿದ್ದು, ಕೇಂದ್ರ ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದುಕೊಂಡಿದೆ.

‘ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಯು ವಿವಿಧ ಹಂತಗಳಲ್ಲಿ ಈ ಔಷಧವನ್ನು ಪರೀಕ್ಷೆಗೆ ಒಳಪಡಿಸಿದೆ. ಆಯುಷ್ ಸಚಿವಾಲಯದ 12 ಮಂದಿಯನ್ನು ಒಳಗೊಂಡ ಅಂತರ್ ಶಿಸ್ತು ತಾಂತ್ರಿಕ ಸಮಿತಿ ಕೂಡ ಪರಿಶೀಲನೆ ಮಾಡಿದೆ. ಚೆನ್ನೈನ ಒಮಂದೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಕೊರೊನಾ ಸೋಂಕಿಗೆ ಒಳಗಾದವರು ಒಟ್ಟು 14 ದಿನಗಳ ಕಾಲ ಈ ಮಾತ್ರೆ ಸೇವಿಸಬೇಕು. ಪ್ರಾಥಮಿಕ ಸಂಪರ್ಕಕ್ಕೆ ಒಳಗಾದವರು ನಾಲ್ಕರಿಂದ ಐದು ದಿನಗಳು ತೆಗೆದುಕೊಂಡರೆ ಸಾಕಾಗುತ್ತದೆ’ ಎಂದು ಕಂಪನಿಯ ಇಲ್ಲಿನ ಮಾರುಕಟ್ಟೆ ವ್ಯವಸ್ಥಾಪಕ ಆರ್. ಶ್ರೀವಲ್ಲಭ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು