ರೈತನಿಗೆ ನೋಟಿಸ್; ಮುಖ್ಯಮಂತ್ರಿ ಗರಂ

7
₹ 1.20 ಲಕ್ಷ ಸಾಲ ಪಡೆದಿದ್ದ ರೈತ

ರೈತನಿಗೆ ನೋಟಿಸ್; ಮುಖ್ಯಮಂತ್ರಿ ಗರಂ

Published:
Updated:

ಬೆಂಗಳೂರು: ಬೆಳೆ ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ರೈತನಿಗೆ ನೋಟಿಸ್ ಕೊಟ್ಟ ಬ್ಯಾಂಕ್ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ತರಾಟೆಗೆ ತೆಗೆದುಕೊಂಡರು.

ದೇವನಹಳ್ಳಿ ತಾಲ್ಲೂಕು ವಿಜಯಪುರದ ಆ್ಯಕ್ಸಿಸ್ ಬ್ಯಾಂಕ್‌ ಶಾಖೆಯಿಂದ ₹ 1.20 ಲಕ್ಷ ಸಾಲ ಪಡೆದಿದ್ದ ರೈತ ದೇವರಾಜ್, ಪ್ರತಿ ತಿಂಗಳು ಬಡ್ಡಿ ಪಾವತಿಸಿದ್ದರು. ಬೆಳೆ ಸಾಲ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬಳಿಕ, ಬಡ್ಡಿ ಕಟ್ಟುವುದನ್ನು ಅವರು ನಿಲ್ಲಿಸಿದ್ದರು. ಅದಕ್ಕೆ ಅಸಲು ಹಾಗೂ ಬಡ್ಡಿ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದರು.

ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾದ ದೇವರಾಜ್, ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ದೂರಿದರು.

ಬ್ಯಾಂಕ್‌ನ ಹಿರಿಯ ಅಧಿಕಾರಿ ವೆಂಕಟೇಶ್‌ಗೆ ಕರೆ ಮಾಡಿದ ಕುಮಾರಸ್ವಾಮಿ, ‘₹ 2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿರುವ ವಿಷಯ ನಿಮಗೆ ಗೊತ್ತಿಲ್ಲವೆ. 2019ರ ಮಾರ್ಚ್‌ನೊಳಗೆ ಸಾಲದ ಹಣವನ್ನು ಸರ್ಕಾರವೇ ಪಾವತಿಸುತ್ತದೆ. ರೈತರಿಗೆ ತೊಂದರೆ ಕೊಟ್ಟರೆ ಪರಿಸ್ಥಿತಿ ಸರಿ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿ, ‘ರೈತರ ₹ 28,500 ಕೋಟಿ ಸಾಲವನ್ನು ಒಂದೇ ಕಂತಿನಲ್ಲಿ ತೀರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಅವಕಾಶ ಕೊಡಬಾರದೆಂದು ಬಿಜೆಪಿ ಸ್ನೇಹಿತರು ದೆಹಲಿಯಲ್ಲಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ, ಅದನ್ನು ನಾನು ಸವಾಲಾಗಿ ತೆಗೆದುಕೊಂಡಿದ್ದೇನೆ’ ಎಂದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !