ಭಾನುವಾರ, ಸೆಪ್ಟೆಂಬರ್ 26, 2021
21 °C

ಸಿಎಂಆರ್‌ ಮಹಾವಿದ್ಯಾಲಯಕ್ಕೆ ‘ರಾಷ್ಟ್ರೀಯ ಚಾತ್ರ ವಿಶ್ವಕರ್ಮ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಬೆಂಗಳೂರು: ಸಿಎಂಆರ್‌ ತಾಂತ್ರಿಕ ಮಹಾವಿದ್ಯಾಲಯವು ‘ಆತ್ಮ ನಿರ್ಭರ ಭಾರತ’ ಮಿಷನ್‌ನ ಸಣ್ಣ ಮತ್ತು ಮಧ್ಯಮ ಉದ್ಯಮಶೀಲತೆ ಆವಿಷ್ಕಾರ ವಿಭಾಗದಲ್ಲಿ ನೀಡಲಾಗುವ 2020ನೇ ಸಾಲಿನ ‘ಎಐಸಿಟಿಇ ರಾಷ್ಟ್ರೀಯ ಚಾತ್ರ ವಿಶ್ವಕರ್ಮ ಪ್ರಶಸ್ತಿಯನ್ನು ಪಡೆದಿದೆ.

ಎಂಜಿನಿಯರಿಂಗ್‌ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲತೆ ಕೋಶದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದ ‘ಯು.ವಿ.ಸ್ಯಾನಿಟೈಸೇಷನ್‌ ಚೇಂಬರ್‌’ಗೆ ಈ ಪುರಸ್ಕಾರ ಲಭಿಸಿದೆ. 

ಪ್ರಾಧ್ಯಾಪಕರಾದ ಫಣಿ ಕುಮಾರ್‌ ಪುಲ್ಲೇಲಾ, ಕೋದಂಡಪಾಣಿ, ಶ್ರೀನಿವಾಸ ರೆಡ್ಡಿ, ಆರ್‌.ಎಸ್‌.ಚಿದಾನಂದ ಅವರ ಮಾರ್ಗದರ್ಶನದಲ್ಲಿ ಸಿಎಸ್‌ಇ, ಸಿವಿಲ್ ಮತ್ತು ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳು ಈ ಚೇಂಬರ್‌ ಸಿದ್ಧಪಡಿಸಿದ್ದರು.  

‘ಯು.ವಿ.ಸ್ಯಾನಿಟೈಸೇಷನ್‌ ಚೇಂಬರ್‌, ಕೊರೊನಾ ವೈರಾಣು ನಾಶಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನೋಟುಗಳು, ಪರ್ಸ್‌ ಸೇರಿದಂತೆ ಇತರೆ ಗೃಹೋಪಯೋಗಿ ವಸ್ತುಗಳನ್ನು ವೈರಾಣುವಿನಿಂದ ರಕ್ಷಿಸಲು ಇದು ಸಹಕಾರಿ’ ಎಂದು ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.